ನೆಲ್ಲಿಕಾರಿನಲ್ಲಿ ಮಹಿಳಾ ಗ್ರಾಮಸಭೆ
Friday, June 19, 2026
ಮೂಡುಬಿದಿರೆ: ನೆಲ್ಲಿಕಾರು ಗ್ರಾಮ ಪಂಚಾಯತ್ ನ 2026-27 ರ ಸಾಲಿನ ಮಹಿಳಾ ಗ್ರಾಮ ಸಭೆಯು ಪಂಚಾಯತ್ ಆಡಳಿತಾಧಿಕಾರಿ ಪುಟ್ಟರಾಜು ಡಿ.ಎ ಅವರ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಭವನದಲ್ಲಿ ನಡೆಯಿತು.
ಪೊಲೀಸ್ ಇಲಾಖೆ, ಅಬಕಾರಿ, ಆರೋಗ್ಯ ಇಲಾಖೆ,ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ಮಾಹಿತಿಯನ್ನು ನೀಡಿದರು.
ಪಂಚಾಯತ್ ಕಾರ್ಯದರ್ಶಿ ದಾಮೋದರ, ಗ್ರಾಮ ಕಾರಣಿಕರಾದ ಅನಿಲ್,ಸಂಜೀವಿನಿ ಒಕ್ಕೂಟದ ಅಧ್ಯಕ್ಷರು, ಎಂಬಿಕೆ, ಸಂಜೀವಿನಿ ಒಕ್ಕೂಟದ ಪದಾಧಿಕಾರಿಗಳು ಅಂಗನವಾಡಿ ಕಾರ್ಯಕತೆ೯ರು, ಆಶಾ ಕಾರ್ಯಕತೆ೯ಯರು ಹಾಗೂ ಮಹಿಳಾ ಗ್ರಾಮಸ್ಥರು ಭಾಗವಹಿಸಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ರಾಜು ಅವರು ಪ್ರಾಸ್ತವಿಕ ಮಾತುಗಳನ್ನಾಡಿದರು. ಪಂಚಾಯತ್ ಸಿಬ್ಬಂದಿ ರೇಣುಕಾ ಸ್ವಾಗತಿಸಿ, ಲಕ್ಷ್ಮಣ ವಂದಿಸಿ,ಪ್ರಶಾಂತ್ ಕುಮಾರ್ ಜೈನ್ ಕಾರ್ಯಕ್ರಮ ನಿರೂಪಿಸಿದರು ಗ್ರಂಥಾಲಯ ಮೇಲ್ವಿಚಾರಕಿ ಪ್ರಮೀಳಾ, ವಿಆರ್ ಡಬ್ಲ್ಯೂ ಪ್ರಜ್ಞಾ ಸಹಕರಿಸಿದರು.
