ಪುತ್ತಿಗೆ-ಗುಂಡ್ಯಡ್ಕದಲ್ಲಿ ರಸ್ತೆ ಕಾಮಗಾರಿ: ನೀರಿನ ಸಂಪಕ೯ದ ಪೈಪ್ ಗಳು ರಸ್ತೆ ಮೇಲೆ, ಸಾವ೯ಜನಿಕರಿಗೆ ನೀರಿನ ತೊಂದರೆ

ಪುತ್ತಿಗೆ-ಗುಂಡ್ಯಡ್ಕದಲ್ಲಿ ರಸ್ತೆ ಕಾಮಗಾರಿ: ನೀರಿನ ಸಂಪಕ೯ದ ಪೈಪ್ ಗಳು ರಸ್ತೆ ಮೇಲೆ, ಸಾವ೯ಜನಿಕರಿಗೆ ನೀರಿನ ತೊಂದರೆ


ಮೂಡುಬಿದಿರೆ: ತಾಲೂಕಿನ ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಗುಂಡ್ಯಡ್ಕದಲ್ಲಿ ಪಿಡಬ್ಲ್ಯೂಡಿ ಇಲಾಖೆಯವರು ರಸ್ತೆ ಕಾಮಗಾರಿಯ ಸಂದಭ೯ದಲ್ಲಿ ನೀರಿನ ಸಂಪಕ೯ದ ಪೈಪ್ ಗಳನ್ನು ಅಗೆದು ಹಾಕಿದ್ದು ಇದರಿಂದಾಗಿ ಗ್ರಾಮಸ್ಥರು ತೊಂದರೆಯನ್ನು ಅನುಭವಿಸುತ್ತಿದ್ದಾರೆ. 


ಪುತ್ತಿಗೆ ಗುಂಡ್ಯಡ್ಕ-ಕಲ್ಲಮುಂಡ್ಕೂರಿಗೆ ಸಂಪಕ೯ ಕಲ್ಪಿಸುವ ರಸ್ತೆಯ ಶ್ರೀನಿವಾಸ ಪುರದ ಬಳಿ ಪಿಡಬ್ಲ್ಯೂಡಿ ಇಲಾಖೆಯವರು  ಡಾಮರೀಕರಣ ಮಾಡುವ ಸಂದಭ೯ದಲ್ಲಿ ರಸ್ತೆಯನ್ನು ಅಗೆದು ಪಂಚಾಯತ್ ನಿಂದ ಮನೆಮನೆಗೆ ನೀಡುವ ನೀರಿನ ಸಂಪಕ೯ದ ಪೈಪ್ ಗಳಿಗೆ ಹಾನಿಗಳಾಗಿದ್ದು ಇದರಿಂದ ನೀರಿನ ಸಂಪಕ೯ಕ್ಕೆ ತೊಂದರೆಯುಂಟಾಗುತ್ತಿದೆ.

ಈ ಸಮಸ್ಯೆಯ ಬಗ್ಗೆ ಸಮಾಜ ಸೇವಕ ವಾಸುದೇವ ನಾಯಕ್ ಅವರು ಪಿಡಬ್ಲ್ಯೂಡಿ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದಾಗ ನೀರಿನ ಪೈಪ್ ಗಳನ್ನು ಮೇಲಕ್ಕೆ ತೆಗೆದು ಹಾಕಲಾಗಿದೆ ಇದರಿಂದಾಗಿ ವಾಹನಗಳು ಅದರ ಮೇಲ್ಗಡೆ ಸಂಚರಿಸುವಾಗ ಪೈಪ್ ಗಳು ಒಡೆದು  ಹೋಗುವ ಸಾಧ್ಯತೆಯಿದೆ. ಈ ಪ್ರದೇಶದಲ್ಲಿ 50ಕ್ಕೂ ಅಧಿಕ ಮನೆಗಳಿದ್ದು ಅವರಿಗೆ ನೀರಿನ  ಸಮಸ್ಯೆ ಕಾಡಲಿದೆ.


ಪುತ್ತಿಗೆ ಗ್ರಾಮ ಪಂಚಾಯತ್ ವ್ಯಾಪ್ತಿಯ 1ನೇ ವಾಡಿ೯ನಲ್ಲಿ  ಪಿಡಬ್ಲ್ಯೂಡಿ ಇಲಾಖೆಯವರು ರಸ್ತೆ ಕಾಮಗಾರಿ ನಡೆಸುವಾಗ ಪಂಚಾಯತ್ ನ ನೀರಿನ ಸಂಪಕ೯ದ ಪೈಪ್ ಗಳು ಒಡೆದು ಹೋಗಿದೆ. ಪಂಚಾಯತ್ ನಿಂದ ನಿರಾಪೇಕ್ಷಣಾ ಪತ್ರವನ್ನು ಪಡೆದುಕೊಳ್ಳದೆಯೆ ಇಲಾಖೆಯವರು ಕಾಮಗಾರಿಯನ್ನು ಆರಂಭಿಸಿದ್ದಾರೆ. 

ಆದರೆ ಸರಿಯಾಗಿ ಹೊಂಡ ತೆಗೆಯದೆ ಮತ್ತು ಆರು ಕೆ. ಜಿ ತೂಕದ ಪೈಪ್ ಅಳವಡಿಸುವ ಬದಲು ನಾಲ್ಕು ಕೆ. ಜಿ. ನ ಪೈಪ್ ಗಳನ್ನು ಅಳವಡಿಸಲಾಗಿದ್ದು  ವಾಹನಗಳು ಸಂಚರಿಸುವಾಗ ಪೈಪ್ ಗಳು ಒಡೆದು ಹೋಗುವ ಸಾಧ್ಯತೆಯಿದೆ ಈ ಆದರಿಂದ ಪಿಡಬ್ಲ್ಯೂಡಿ ಇಲಾಖೆಯವರು ಕಾಮಗಾರಿಯನ್ನು ಸರಿಯಾಗಿ ಮಾಡಿ ಜನರ ಸಮಸ್ಯೆಯನ್ನು ಬಗೆಹರಿಸಬೇಕಾಗಿದೆ- ವಾಸುದೇವ ನಾಯಕ್ (ಅಕ್ರಮ ಸಕ್ರಮ ಸಮಿತಿಯ ಸದಸ್ಯ)

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article