ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷರಾಗಿ ಚಂದ್ರಹಾಸ್ ಸಾಧು ಸನಿಲ್, ಕಾಯ೯ದಶಿ೯ಯಾಗಿ ರೆಂಜಾಳ ವಿದ್ಯಾಧರ ಜೈನ್ ಅವಿರೋಧವಾಗಿ ಆಯ್ಕೆ

ಜಿಲ್ಲಾ ಕಂಬಳ ಸಮಿತಿಯ ಅಧ್ಯಕ್ಷರಾಗಿ ಚಂದ್ರಹಾಸ್ ಸಾಧು ಸನಿಲ್, ಕಾಯ೯ದಶಿ೯ಯಾಗಿ ರೆಂಜಾಳ ವಿದ್ಯಾಧರ ಜೈನ್ ಅವಿರೋಧವಾಗಿ ಆಯ್ಕೆ


ಮೂಡುಬಿದಿರೆ: ಜಿಲ್ಲಾ ಕಂಬಳ ಸಮಿತಿಯ ನೂತನ ಅಧ್ಯಕ್ಷರಾಗಿ ಮೂಡುಬಿದಿರೆ ತಾಲೂಕಿನ ಹೊಸಬೆಟ್ಟು ಏರಿಮಾರು ಬಕೆ೯ಯ ಚಂದ್ರಹಾಸ್ ಸಾಧು ಸನಿಲ್, ಕಾಯ೯ದಶಿ೯ಯಾಗಿ ರೆಂಜಾಳ ವಿದ್ಯಾಧರ್ ಜೈನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. 

ಭಾನುವಾರ ಸಮಾಜ ಮಂದಿರದಲ್ಲಿ ಬೆಳಪು ಡಾ. ದೇವಿ ಪ್ರಸಾದ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ  ನಡೆದ ದ.ಕ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ವ್ಯಾಪ್ತಿಯ ಜಿಲ್ಲಾ ಕಂಬಳ ಸಮಿತಿಯ ಮಹಾಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.

ಉಪಾಧ್ಯಕ್ಷರುಗಳಾಗಿ ಬಳ್ಕುಂಜೆ ಕಂಬಳ ಸಂಘಟಕಿ ಮಲ್ಲಿಕಾ ಯಶವಂತ್ ಶೆಟ್ಟಿ, ಹೊಕ್ಕಾಡಿಗೋಳಿ ಕಂಬಳ ಸಂಘಟಕ ರಶ್ಮಿತ್ ಶೆಟ್ಟಿ, ಕಂಬಳದ ಕೋಣಗಳ ಯಜಮಾನರುಗಳಾದ ಮಿಜಾರು ಶಕ್ತಿ ಪ್ರಸಾದ್ ಶೆಟ್ಟಿ, ಬೋಳಾರ ತ್ರಿಶಾಲ್ ಕೆ. ಪೂಜಾರಿ, ಇರುವೈಲು ಪಾಣಿಲ ಸತೀಶ್ಚಂದ್ರ ಸಾಲ್ಯಾನ್, ಮೋಲ೯ ಗಿರೀಶ್ ಆಳ್ವ, ಬೆಳುವಾಯಿ ಕೌಶಿಕ್ ದಿನಕರ ಶೆಟ್ಟಿ, ಎಮಾ೯ಳ್ ಪುಚ್ಚೊಟ್ಟು ಬೀಡು ಬಾಲಚಂದ್ರ ಲೋಕಯ್ಯ ಶೆಟ್ಟಿ. 

ಜೊತೆ ಕಾಯ೯ದಶಿ೯ಗಳಾಗಿ  ಬೆಳ್ಳಿಪ್ಪಾಡಿ ಕೈಪ ಕೇಶವ ಭಂಡಾರಿ, ಮೋಲ೯ ಕೋಡಿ ಮಜಲು ಸಂಜೀವ ಪೂಜಾರಿ., ಕೋಶಾಧಿಕಾರಿಯಾಗಿ ಸಿದ್ದಕಟ್ಟೆ ಪೊಡುಂಬ ಸಂದೀಪ್ ಶೆಟ್ಟಿ ಆಯ್ಕೆಯಾಗಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article