ಸಾಧಿಸುವ ಮನಸ್ಸು ಮತ್ತು ಧೈರ್ಯ ಇದ್ದರೆ ಅಂಗ ವೈಕಲ್ಯ ದೊಡ್ಡದಲ್ಲ: ಸಬಿತಾ ಮೊನಿಸ್
Saturday, June 20, 2026
ಮೂಡುಬಿದಿರೆ: ಸಾಧಿಸುವ ಮನಸ್ಸು ಮತ್ತು ಧೈರ್ಯದಿಂದ ಮುನ್ನುಗ್ಗಿದರೆ ಅಂಗವೈಕಲ್ಯ ದೊಡ್ಡದಲ್ಲ. ವಿದ್ಯಾರ್ಥಿಗಳು ಯಾವುದೇ ಸಂದರ್ಭದಲ್ಲಿ ದೃತಿಗೆಡಬಾರದು ಎಂದು ವಿಶೇಷ ಚೇತನ ವ್ಯಕ್ತಿ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಕ್ಷೇಮ ಪಾಲನಾಧಿಕಾರಿ ಕುಮಾರಿ ಸಬಿತ ಮೋನಿಸ್ ಹೇಳಿದರು.
ಅವರು ಇಲ್ಲಿನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಪಾಡ್ಯಾರ್ ನಲ್ಲಿ ನಡೆದ "ಸಂಭ್ರಮ ಶನಿವಾರ" ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ತಮ್ಮ ಜೀವನದ ಯಶೋಗಾಥೆಯನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ಪತ್ರಕರ್ತ ಪುತ್ತಿಗೆ ಮನೆ ಧನಂಜಯ, ಸ್ವಯಂಸೇವಕ ಶಿಕ್ಷಕಿ ಪ್ರತಿಭಾ ಮತ್ತು ಪ್ರಜ್ವಲ್ ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ಪ್ರಸನ್ನ ವಿ ಶೆಣೈ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಸಹ ಶಿಕ್ಷಕ ರಾಬರ್ಟ್ ಡಿಸೋಜಾ ವಂದಿಸಿದರು.