ಸವೀ೯ಸ್ ರಸ್ತೆ ಪೂಣ೯ಗೊಳಿಸಲು, ಹಳೆ ರಸ್ತೆಯನ್ನು ಸರಿಪಡಿಸುವಂತೆ ಆಗ್ರಹಿಸಿ ಗ್ರಾಮಸ್ಥರಿಂದ ಪ್ರತಿಭಟನೆ

ಸವೀ೯ಸ್ ರಸ್ತೆ ಪೂಣ೯ಗೊಳಿಸಲು, ಹಳೆ ರಸ್ತೆಯನ್ನು ಸರಿಪಡಿಸುವಂತೆ ಆಗ್ರಹಿಸಿ ಗ್ರಾಮಸ್ಥರಿಂದ ಪ್ರತಿಭಟನೆ


ಮೂಡುಬಿದಿರೆ: ರಾ.ಹೆ. ಕಾಮಗಾರಿಯಿಂದಾಗಿ ಪುತ್ತಿಗೆ-ಕಾಯರ್ ಪುಂಡು ರಸ್ತೆಯಲ್ಲಿ ಹೊಂಡ ಗುಂಡಿಗಳಾಗಿದ್ದು ವಾಹನ ಸಂಚಾರಕ್ಕೆ ತೊಂದರೆಯುಂಟಾಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯರು ಮಂಗಳವಾರ ಬೆಳಗ್ಗೆ ರಾ. ಹೆದ್ದಾರಿಗೆ ಕಬ್ಬಿಣದ ಪೈಪ್ ನ್ನು ಅಡ್ಡ ಇಟ್ಟು ಪ್ರತಿಭಟನೆ ನಡೆಸಿದರು.


ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಸ್ಥಳೀಯರಾದ ವಲೇರಿಯನ್ ಸಿಕ್ವೇರಾ ಅವರು ರಾ.ಹೆ. ಇಲಾಖೆಯ ಕಾಮಗಾರಿ ನಡೆಯುವ ಸಂದಭ೯ದಲ್ಲಿ ಸವೀ೯ಸ್ ರಸ್ತೆಯನ್ನು ಪೂಣ೯ಗೊಳಿಸದೆ ಹಳೆ ರಸ್ತೆಯಲ್ಲಿಯೇ ಹೈವೇಯವರ ಘನ ವಾಹನಗಳು ಸಂಚಾರ ಮಾಡುತ್ತಿರುವುದರಿಂದ ಡಾಂಬರು ಕಿತ್ತು ಮೇಲಕ್ಕೆ ಬಂದಿದ್ದು ಹೊಂಡಗಳಾಗಿ ರಸ್ತೆಯು ಸಂಪೂಣ೯ ಕೆಟ್ಟು ಹೋಗಿದೆ. 


ಹಳೆ ರಸ್ತೆಯು ಇಳಿಜಾರಿನಂತಿದ್ದು ಇಲ್ಲಿ ಬಸ್ಸುಗಳು ಮತ್ತು ಇತರ ವಾಹನಗಳು ಸಂಚರಿಸುವಾಗ ಅಡಚಣೆಯಾಗುತ್ತಿದೆ. ಅಲ್ಲದೆ ಹೆಣ್ಣು ಮಕ್ಕಳು ಸಹಿತ ಹಲವಾರು ಮಂದಿ ಸ್ಕೂಟಿಯಿಂದ ಬಿದ್ದು ಗಾಯಗೊಂಡಿದ್ದಾರೆ. ಹೆದ್ದಾರಿ ಇಲಾಖೆಯ ಅಧಿಕಾರಿಗಳು ಸವೀ೯ಸ್ ರಸ್ತೆಯ ಕಾಮಗಾರಿಯನ್ನು ಪೂಣ೯ಗೊಳಿಸಿ ಸರಿ ಪಡಿಸದಿದ್ದರೆ ಗ್ರಾಮಸ್ಥರನ್ನು ಸೇರಿಸಿ ರಾ. ಹೆ.ಇಲಾಖೆಯ ಕಛೇರಿಯ ಮುಂಭಾಗ ಬೃಹತ್ ಪ್ರತಿಭಟನೆಯನ್ನು ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. 


ಪ್ರತಿಭಟನೆಯ ಮಧ್ಯೆ ಡಿಬಿಲ್ ಕಂಪನಿಯ ಬಾಲಾಜಿ ಅವರನ್ನು ಫೋನ್ ಕರೆಯ ಮೂಲಕ ಸಂಪಕಿ೯ಸಿ ಸಮಸ್ಯೆಯನ್ನು ತಿಳಿಸಿದಾಗ, ಎರಡು ವಾರದೊಳಗಡೆ ರಸ್ತೆಯನ್ನು ದುರಸ್ಥಿ ಮಾಡಲಾಗುವುದು ಎಂದು ಭರವಸೆ ನೀಡಿದಾಗ ಪ್ರತಿಭಟನೆಯನ್ನು ನಿಲ್ಲಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article