ಬಾಬು ರಾಜೇಂದ್ರ ಪ್ರೌಢಶಾಲೆಯಲ್ಲಿ ಸಂಸ್ಥಾಪಕರ ದಿನಾಚರಣೆ
ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷ, ಮಾಜಿ ಸಚಿವ ಕೆ. ಅಭಯಚಂದ್ರ ಜೈನ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಮೂಡುಬಿದಿರೆಯ ಎರಡನೇ ಪ್ರೌಢಶಾಲೆ ಇದಾಗಿದ್ದು ಇಲ್ಲಿಗೆ ಬೇರೆ ಜಿಲ್ಲೆಗಳಿಂದ ವಿದ್ಯಾಥಿ೯ಗಳು ಬರುತ್ತಿದ್ದಾರೆ. ಇಲ್ಲಿ ವಸತಿ ನಿಲಯಗಳು ಇರುವುದರಿಂದ ಇದು ಸಹಕಾರಿಯಾಗಿದೆ ಎಂದರು.
ಎಂಸಿಎಸ್ ಬ್ಯಾಂಕಿನ ವಿಶೇಷ ಕತ೯ವ್ಯಾಧಿಕಾರಿ ಚಂದ್ರಶೇಖರ ಎಂ. ಮಾತನಾಡಿ ಅತ್ಯುತ್ತಮ ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗಳಿಗೆ ಶೇ. 100 ಫಲಿತಾಂಶ ಬರುವಂತೆ ಮಾಡುವುದು ಸಾಧನೆಯಲ್ಲ ಬದಲಾಗಿ ಶೇ. 40ರಷ್ಟು ಅಂಕಗಳನ್ನು ಪಡೆದಿರುವ ವಿದ್ಯಾಥಿ೯ಗಳನ್ನು ಉತ್ತಮ ಅಂಕಗಳು ಬರುವಂತೆ ಮಾಡುವುದು ಸಾಧನೆ ಹಾಗೂ ವಿದ್ಯಾಥಿ೯ಗಳು ಸ್ಪಧಾ೯ತ್ಮಕ ಪರೀಕ್ಷೆಗಳನ್ನು ಬರೆಯುವಂತೆ ಮಾಡುವ ನಿಟ್ಟಿನಲ್ಲಿ ಶಿಕ್ಷಣ ನೀಡಬೇಕಾಗಿದೆ. ಕ್ವಾಲಿಟಿ ಶಿಕ್ಷಣ ದೊರೆತರೆ ವಿದ್ಯಾಥಿ೯ಗಳು ತಾವಾಗಿಯೇ ಶಾಲೆಯನ್ನು ಹುಡುಕಿಕೊಂಡು ಬರುತ್ತಾರೆ ಎಂದರು.
ಬಾಲಕಾಮಿ೯ಕ ವಿರೋಧಿ ದಿನದ ಅಂಗವಾಗಿ ಶಿಕ್ಷಕಿ ಅಶ್ವಿನಿ ಮಾಹಿತಿ ನೀಡಿದರು.
ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಪುಷ್ಪರಾಜ್ ಜೈನ್, ಸದಸ್ಯರಾದ ಬಾಹುಬಲಿ, ರಾಮ್ ಪ್ರಸಾದ್ ಭಟ್, ಪದ್ಮಜಾ, ಅಜಿತ್ ಕುಮಾರ್, ವೆಂಕಟೇಶ್ ಕಾಮತ್, ನಾಗರಾಜ್, ನಿವೃತ ಸಿಬಂದಿ ದಾಮೋದರ್ ಆಚಾರ್ ಭಾಗವಹಿಸಿದ್ದರು. ಶಿಕ್ಷಕರಾದ ಭರತ್, ಕಿರಣ್, ಅಣ್ಣು, ಸಂಜೀವ ಉಪಸ್ಥಿತರಿದ್ದರು.
ಶಾಲಾ ಸಂಚಾಲಕ ರಮನಾಥ್ ಭಟ್ ಸ್ವಾಗತಿಸಿದರು. ಶಿಕ್ಷಕ ವೆಂಕಟ್ರಮಣ ಕೆರೆಗದ್ದೆ ಕಾಯ೯ಕ್ರಮ ನಿರೂಸಿದರು. ನಿವೃತ್ತ ಶಿಕ್ಷಕ ಬಾಹುಬಲಿ ವರದಿ ಮಂಡಿಸಿದರು. ಮುಖ್ಯ ಶಿಕ್ಷಕಿ ತೆರೆಜಾ ಕಡೋ೯ಜಾ ವಂದಿಸಿದರು.
