ನೇತಾಜಿ ಬ್ರಿಗೇಡ್‌ನಿಂದ ಗಾಂಧಿನಗರ ಶಾಲೆಯ ವಿದ್ಯಾಥಿ೯ಗಳಿಗೆ ಉಚಿತ ಪುಸ್ತಕ ವಿತರಣೆ

ನೇತಾಜಿ ಬ್ರಿಗೇಡ್‌ನಿಂದ ಗಾಂಧಿನಗರ ಶಾಲೆಯ ವಿದ್ಯಾಥಿ೯ಗಳಿಗೆ ಉಚಿತ ಪುಸ್ತಕ ವಿತರಣೆ


ಮೂಡುಬಿದಿರೆ: ಪುರಸಭಾ ವ್ಯಾಪ್ತಿ ಗಾಂಧಿನಗರ ಸರ್ಕಾರಿ ಶಾಲೆಯ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸದ ಸಂದಭ೯ದಲ್ಲಿ ಮಹಾ ಪೋಷಕ - ಶಿಕ್ಷಕರ ಸಭೆ ಹಾಗೂ ವಿದ್ಯಾರ್ಥಿಗಳಿಗೆ ಪುಸ್ತಕ ಮತ್ತು ನೀರಿನ ಬಾಟಲಿ ವಿತರಣೆ, ಮೂಡುಬಿದಿರೆಯ ನೇತಾಜಿ ಬ್ರಿಗೇಡ್ ಸಂಸ್ಥೆಯ 7ನೇ ವರ್ಷದ ಸೇವಾ ಯೋಜನೆ ಅಂಗವಾಗಿ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕಗಳನ್ನು ವಿತರಿಸಲಾಯಿತು.

ಶಾಲೆಯ 1ನೇ ತರಗತಿಗೆ ಹೊಸದಾಗಿ ದಾಖಲಾದ ವಿದ್ಯಾರ್ಥಿಗಳು ದೀಪ ಬೆಳಗಿಸುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ನೋಡೆಲ್ ಅಧಿಕಾರಿಯಾಗಿ ಆಗಮಿಸಿದ ಆದಾಯ ಇಲಾಖೆ ಅಧಿಕಾರಿ ವರುಣ್ ಮಾತನಾಡಿ, ಹಿಂದೆ ಶಾಲೆಗಳಲ್ಲಿ ಇಂದಿನಷ್ಟು ಸೌಲಭ್ಯಗಳು ಇರಲಿಲ್ಲ. ಇಂದು ಸರ್ಕಾರ ಮತ್ತು ದಾನಿಗಳ ನೆರವಿನಿಂದ ಹಲವು ಸವಲತ್ತುಗಳು ನಮ್ಮ ಮಕ್ಕಳಿಗೆ ಸಿಗುತ್ತಿವೆ. ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ದೊರೆಯುತ್ತಿದ್ದು, ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ದಾನಿ ಗಿರೀಶ್ ಶೆಟ್ಟಿ ಜೋರ್ಡನ್ ಕಟೀಲ್ ಹಾಗೂ ಕಟೀಲು ಅಜಾರು ಗುತ್ತು ವಿಜಯ್ ಶೆಟ್ಟಿ ಅವರು ವಿದ್ಯಾರ್ಥಿಗಳಿಗೆ ಒದಗಿಸಿದ ನೀರಿನ ಸ್ಟೀಲ್ ಬಾಟಲಿಗಳನ್ನು ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ದಾನಿಗಳನ್ನು ಗೌರವಿಸಲಾಯಿತು.

ಪುರಸಭಾ ಮಾಜಿ ಸದಸ್ಯೆ ದಿವ್ಯಾ ಜಗದೀಶ್, ನೇತಾಜಿ ಬ್ರಿಗೇಡ್ ಸಂಚಾಲಕರು ರಾಹುಲ್ ಕುಲಾಲ್ , ಅಧ್ಯಕ್ಷ ದಿನೇಶ್, ಕಾರ್ಯದರ್ಶಿ ನಂದ ಭಟ್, ಸಹ ಸಂಚಾಲಕ ಎಸ್.ಕುಮಾರ್ ಮಾಸ್ತಿಕಟ್ಟೆ, ಅಭಿಷೇಕ್ ಸಾಲ್ಯಾನ್, ಪೂರ್ಣಚಂದ್ರ , ಗ್ಯಾರೇಜ್ ಮಾಲಕರ ಸಂಘ ಮೂಡುಬಿದಿರೆ ಘಟಕದ ಕಾರ್ಯದರ್ಶಿ ಪ್ರಕಾಶ್ ಅಮೀನ್, ಕಟೀಲು ಅಜಾರು ಗುತ್ತು ವಿಜಯ್ ಶೆಟ್ಟಿ, ಎಸ್.ಡಿ.ಎಂ.ಸಿ ಅಧ್ಯಕ್ಷೆ ಸುನೀತಾ, ಮುಖ್ಯಶಿಕ್ಷಕಿ ಕಸ್ತೂರಿ ಎಚ್. ಹಾಗೂ ಶಿಕ್ಷಕಿಯರಾದ ಭವ್ಯಾ, ಸುಪ್ರಿತಾ ಪೋಷಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article