ಆಟೋ ರಿಕ್ಷಾ ದರ ಪರಿಷ್ಕರಿಸುವಂತೆ ಮೂಡುಬಿದಿರೆ ಆಟೋ ಚಾಲಕ ಮಾಲಕರ ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ

ಆಟೋ ರಿಕ್ಷಾ ದರ ಪರಿಷ್ಕರಿಸುವಂತೆ ಮೂಡುಬಿದಿರೆ ಆಟೋ ಚಾಲಕ ಮಾಲಕರ ಸಂಘದಿಂದ ಜಿಲ್ಲಾಧಿಕಾರಿಗೆ ಮನವಿ


ಮೂಡುಬಿದಿರೆ: ಇಂಧನ, ಇಂಜಿನ್ ಆಯಿಲ್, ಬಿಡಿಭಾಗಗಳು, ಎಫ್‌ಸಿ ಹಾಗೂ ವಿಮೆ ವೆಚ್ಚ ಹೆಚ್ಚಿರುವುದರಿಂದ ಪ್ರಸ್ತುತ ಕನಿಷ್ಠ ಬಾಡಿಗೆಯಾದ 35 ರೂಪಾಯಿಯನ್ನು 50 ರೂಪಾಯಿಗೆ ಹಾಗೂ ಪ್ರತಿ ಕಿಲೋಮೀಟರ್‌ಗೆ 20 ರೂಪಾಯಿಯನ್ನು 30 ರೂಪಾಯಿಗೆ ಹೆಚ್ಚಿಸುವಂತೆ  ಆಗ್ರಹಿಸಿ ಮೂಡುಬಿದಿರೆ ಆಟೋ ಚಾಲಕ ಮಾಲಕರ ಸಂಘವು  ಮಂಗಳವಾರ ತಹಸೀಲ್ದಾರ್ ಮುಖಾಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತು.

ಆಟೋ ಚಾಲಕ-ಮಾಲಕರ ಸಂಘದ ಅಧ್ಯಕ್ಷ ದೀಪಕ್ ರಾಜ್ ಕೊಡಂಗಲ್ಲು, ಕಾರ್ಯದರ್ಶಿ ನವೀನ್ ಒಂಟಿಕಟ್ಟೆ, ಉಪಾಧ್ಯಕ್ಷರಾದ ಸಂತೋಷ್ ಬಾಕ್ಯಾರ್‌ಕೊಡಿ ಮತ್ತು ವಿಕ್ಟರ್ ಫೆರ್ನಾಂಡಿಸ್, ಕಾರ್ಯಕಾರಿ ಸಮಿತಿ ಸದಸ್ಯರಾದ ಸುರೇಶ್ ಕೋಟ್ಯಾನ್ ಹಾಗೂ ಜಯರಾಮ್ ರಾವ್ ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article