ಅಪಾಯಕಾರಿ ಮರಗಳ ಗೆಲ್ಲುಗಳನ್ನು ಕತ್ತರಿಸುವ ಕಾಯ೯ ಆರಂಭ

ಅಪಾಯಕಾರಿ ಮರಗಳ ಗೆಲ್ಲುಗಳನ್ನು ಕತ್ತರಿಸುವ ಕಾಯ೯ ಆರಂಭ


ಮೂಡುಬಿದಿರೆ: ಮಳೆಗಾಳದಲ್ಲಿ ಬೀಸುವ ಗಾಳಿಯಿಂದ ಮರಗಳಿಂದ ಅಪಾಯ ಉಂಟಾಗಬಹುದೆನ್ನುವ ನಿಟ್ಟಿನಲ್ಲಿ ರಸ್ತೆ ಬದಿಗಳಲ್ಲಿರುವ  ಅಪಾಯಕಾರಿ ಮರಗಳ ಗೆಲ್ಲುಗಳನ್ನು ಕತ್ತರಿಸುವ ಕಾಯ೯ವು ಮೂಡುಬಿದಿರೆ ಪುರಸಭಾ ವ್ಯಾಪ್ತಿಯಲ್ಲಿ ಆರಂಭಗೊಂಡಿದೆ. 

ಮೂಡುಬಿದಿರೆಯ ಅರಣ್ಯ ಇಲಾಖೆ ಮತ್ತು ಮೆಸ್ಕಾಂ ಇಲಾಖೆಯು ಜಂಟಿಯಾಗಿ ಕಾಯ೯ವನ್ನು ಆರಂಭಿಸಿದ್ದಾರೆ.

ಮೂಡುಬಿದಿರೆ-ಮಾರೂರು, ಮೂಡುಬಿದಿರೆ-ಬಂಟ್ವಾಳ, ಮೂಡುಬಿದಿರೆ-ಕಾಕ೯ಳ ಹಾಗೂ ಮೂಡುಬಿದಿರೆ- ವಿದ್ಯಾಗಿರಿ ರಸ್ತೆ ಬದಿಯಲ್ಲಿ ಅ

ಮರಗಳ ಅಪಾಯಕಾರಿ ಗೆಲ್ಲುಗಳು ರಸ್ತೆಗೆ ಬಾಗಿಕೊಂಡಿದ್ದು ಇದನ್ನು ತೆರವುಗೊಳಿಸುವಂತೆ ಸಾವ೯ಜನಿಕರು ಇತ್ತೀಚೆಗೆ ಶಾಸಕರು ನಡೆಸಿದ ಮಳೆಗಾಲದ ಪೂವ೯ಸಿದ್ಧತೆಯ ಬಗ್ಗೆ ನಡೆಸಿದ ಸಭೆಯಲ್ಲಿ ಮನವಿ ಮಾಡಿದ್ದರು.

ಈ ಬಗ್ಗೆ ಶಾಸಕ ಉಮಾನಾಥ ಕೋಟ್ಯಾನ್ ಅವರು ಅರಣ್ಯ ಮತ್ತು ಮೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ಅಪಾಯಕಾರಿ ಮರ ಮತ್ತು ಗೆಲ್ಲುಗಳನ್ನು ತೆಗೆಯುವಂತೆ ಸೂಚಿಸಿದ್ದರು.

ಇದೀಗ ಎರಡೂ ಇಲಾಖೆಯು ಸೇರಿಕೊಂಡು ಕಾಯ೯ಪ್ರವೃತ್ತರಾಗಿದ್ದು ಮೂಡುಬಿದಿರೆಯ ದೊಡ್ಡಮನೆ ರಸ್ತೆ ಬಳಿಯಿಂದ ಮಾರೂರು ವರೆಗಿನ ರಸ್ತೆಯ ಬದಿಯಲ್ಲಿರುವ, ರಸ್ತೆಗೆ ಬಾಗಿಕೊಂಡಿರುವ ಮರಗಳ ಗೆಲ್ಲುಗಳನ್ನು ತೆಗೆದಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article