ಇಎಸ್‌ಐ ಆಸ್ಪತ್ರೆಯ ನೌಕರರ ವಜಾ: ಮರುನೇಮಕಕ್ಕೆ ಶಾಸಕರ ಸೂಚನೆ

ಇಎಸ್‌ಐ ಆಸ್ಪತ್ರೆಯ ನೌಕರರ ವಜಾ: ಮರುನೇಮಕಕ್ಕೆ ಶಾಸಕರ ಸೂಚನೆ


ಪುತ್ತೂರು: ಮಂಗಳೂರಿನ ಇಎಸ್‌ಐ ಆಸ್ಪತ್ರೆಯಲ್ಲಿ ಹೊರಗುತ್ತಿಗೆ ನೌಕರರಾಗಿ ಕಳೆದ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದ 9 ಮಂದಿ ನೌಕರರನ್ನು ಸಂಸ್ಥೆ ವಜಾ ಮಾಡಿದ್ದು ಮೇ.31 ರ ಬಳಿಕ ಕೆಲಸಕ್ಕೆ ಬಾರದಂತೆ ನೊಟೀಸ್ ನೀಡಿತ್ತು. ಈ ವಿಚಾರದಲ್ಲಿ ಇಂದು ವಜಾಗೊಂಡ ನೌಕರರು ಶಾಸಕ ಅಶೋಕ್ ರೈ ಭೇಟಿಯಾಗಿ ಮನವಿ ಮಾಡಿದ್ದು ವಜಾಗೊಳಿಸಿದ ಕಾರ್ಮಿಕರನ್ನು ಮತ್ತೆ ನೇಮಿಸುವಂತೆ ಶಾಸಕರು ಆರೋಗ್ಯ ಇಲಾಖೆಗೆ ಸೂಚನೆಯನ್ನು ನೀಡಿದ್ದಾರೆ.

9 ಮಂದಿ ನೌಕರರ ಪೈಕಿ ಮಂಗಳೂರು, ಪುತ್ತೂರು ಸೇರಿದಂತೆ ವಿವಿಧ ತಾಲೂಕಿನವರಿದ್ದಾರೆ. ವಜಾಗೊಂಡ ನೌಕರರ ಪೈಕಿ 5 ಮಂದಿ ನರ್ಸ್‌ಗಳು ಮತ್ತು ಉಳಿದವರು ಲ್ಯಾಬ್ ಸೆಕ್ಷನ್‌ನಲ್ಲಿ ಕೆಲಸ ಮಾಡುತ್ತಿದ್ದರು. ಸಿಬಂದಿಗಳ ಹೊರೆ ಇಳಿಯುವ ಉದ್ದೇಶದಿಂದ ಇಲಾಖೆ ಈ ಕ್ರಮಕ್ಕೆ ಮುಂದಾಗಿತ್ತು. ವಜಾಗೊಳಿಸಿದ ಎಲ್ಲಾ ನೌಕರರನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಶಾಸಕರು ಆರೋಗ್ಯ ಇಲಾಖೆಯ ಕಮಿಷನರ್‌ಗೆ ಸೂಚನೆಯನ್ನು ನೀಡಿದರು.

ನ್ಯಾಯ ಕೊಟ್ಟ ಶಾಸಕರು:

ನಮ್ಮ ಸಮಸ್ಯೆಯನ್ನು ಹೇಳಿಕೊಳ್ಳಲು ನಾವು ಮಂಗಳೂರಿನಿಂದ ಶಾಸಕ ಅಶೋಕ್ ರೈ ಕಚೇರಿಗೆ ಬಂದಿದ್ದೇವೆ. ನಮ್ಮನ್ನು ನ್ಯಾಯಯುತವಾಗಿ ಉಪಚಾರ ಮಾಡಿದ್ದಾರೆ. ತಕ್ಷಣವೇ ಸಮಸ್ಯೆಗೆ ಸ್ಪಂದಿಸಿ ಸಂಬಂಧಿಸಿದವರಿಗೆ ಕರೆ ಮಾಡಿ ನಮ್ಮನ್ನು ಮತ್ತೆ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಸೂಚನೆಯನ್ನು ನೀಡಿದ್ದಾರೆ. ಇಲ್ಲಿಗೆ ಬಂದ ಕಾರಣ ನಮಗೆ ನ್ಯಾಯ ಸಿಕ್ಕಿದೆ. ಶಾಸಕರಿಗೆ ನಾವು ಅಭಿನಂದನೆಯನ್ನು ಸಲ್ಲಿಸುತ್ತಿದ್ದೇವೆ. -ಶಿಲ್ಪ ಪಟಗಾರ, ಶುಶ್ರೂಷಾಧಿಕಾರಿ ಇಎಸ್‌ಐ ಆಸ್ಪತ್ರೆ

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article