ಮಲ್ಲಿಗೆ ಕೃಷಿಗೂ ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಿಸಲು ಮನವಿ

ಮಲ್ಲಿಗೆ ಕೃಷಿಗೂ ಶೂನ್ಯ ಬಡ್ಡಿದರದಲ್ಲಿ ಸಾಲ ವಿತರಿಸಲು ಮನವಿ


ಶಿರ್ವ: ಸುವರ್ಣ ಸಂಭ್ರಮವನ್ನು ಕಂಡ ಶಿರ್ವ ಸಹಕಾರಿ ವ್ಯವಸಾಯಿಕ ಸಂಘ.ನಿ. ಶಿರ್ವ ಇದರ ಅಧ್ಯಕ್ಷ ಕುತ್ಯಾರು ಪ್ರಸಾದ್ ಶೆಟ್ಟಿಯವರ ನೇತೃತ್ವದ ನಿಯೋಗ ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರನ್ನು ಭೇಟಿಯಾಗಿ ಈ ಭಾಗದ ಮಲ್ಲಿಗೆ ಕೃಷಿಕರ ಪರವಾಗಿ ಮನವಿ ಸಲ್ಲಿಸಿದರು.

ಈ ಬಾರಿ ನಬಾರ್ಡ್ ಸಂಸ್ಥೆಯು ಕೃಷಿಕರಿಗಾಗಿ ಒದಗಿಸುವ ಶೂನ್ಯ ಬಡ್ಡಿ ದರದ ಎಂ.ಕೆ.ಸಿ.ಸಿ ಸಾಲದ ಮಿತಿ ನಿಗದಿಪಡಿಸಲು ವಿಧಿಸಿದ ಷರತ್ತುಗಳ ಅನ್ವಯ ಈ ಹಿಂದಿನ ಮೊತ್ತದ ಸಾಲವನ್ನು ವಿತರಿಸಲು ಸಾಧ್ಯವಾಗುತ್ತಿಲ್ಲ. ಅದ್ದರಿಂದ ಕಾರ್ಯವ್ಯಾಪ್ತಿಯ ಮಲ್ಲಿಗೆ ಕೃಷಿಕರ ಹಿತದೃಷಿಯಿಂದ ಈ ಹಿಂದಿನಂತಯೇ ಸಾಲ ವಿತರಿಸಲು ಅನುಕೂಲ ಮಾಡಿಕೊಡುವಂತೆ ಸಂಬಂಧಪಟ್ಟ ಇಲಾಖೆಗಳಿಗೆ ಮನವರಿಕೆ ಮಾಡುವಂತೆ ವಿನಂತಿಸಿಕೊಂಡರು. 

ಈ ಸಂದರ್ಭದಲ್ಲಿ ಸಂಘದ ನಿರ್ದೇಶಕ ಹರಿಣಾಕ್ಷ ಶೆಟ್ಟಿ ಪಿಲಾರು ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article