ಸಂಡೆ ಬಜಾರ್ ವ್ಯಾಪಾರಿಗಳಿಗೆ ಕಿರುಕುಳ: ಜೂನ್ 11 ರಂದು ಬೃಹತ್ ಪ್ರತಿಭಟನೆ
Tuesday, June 9, 2026
ಮಂಗಳೂರು: ಅನೇಕ ವರ್ಷಗಳಿಂದ ಪುರಭವನದ ಬಳಿ ನಡೆಯುತ್ತಿರುವ ಭಾನುವಾರ ರಜಾಡಿನ ನಡೆಯುವ ಸಂಡೆ ಬಜಾರ್ ಬೀದಿಬದಿ ವ್ಯಾಪಾರಿಗಳ ವಿರುದ್ಧ ಸುಳ್ಳು ಆರೋಪ ಹೊರಿಸಿ ತೆರವುಗೊಳಿಸಲು ನಕಲಿ ಪತ್ರಕರ್ತ ಮತ್ತು ಯೂ ಟ್ಯೂಬ್ ಚಾನೆಲನ್ನು ಬಳಸಿಕೊಂಡು ಬೆದರಿಸಿ ತೆರವು ಮಾಡಲು ನಗರಪಾಲಿಕೆ ಅಧಿಕಾರಿಗಳಿಗೆ ಒತ್ತಡ ಹಾಕುತ್ತಿರುವ ವ್ಯಕ್ತಿಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ, ಸಂಡೆ ಬಜಾರ್ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಆಗುವವವರೆಗೆ ಪುರಭವನದ ಹೊರಗೆ ಯಥಾಸ್ಥಿತಿ ವ್ಯಾಪಾರ ಮಾಡಲು ಅವಕಾಶ ನೀಡಬೇಕೆಂದು ಆಗ್ರಹಿಸಿ ಜೂ.11 ರಂದು ಬೆಳಗ್ಗೆ 10ಕ್ಕೆ ಮಂಗಳೂರು ಮಹಾ ನಗರಪಾಲಿಕೆ ಕಚೇರಿ ಎದುರು ಬೃಹತ್ ಪ್ರತಿಭಟನೆ ನಡೆಸಲು ನಡೆಸಲು ಇಂದು ನಡೆದ ದ.ಕ. ಜಿಲ್ಲಾ ಬೀದಿಬದಿ ವ್ಯಾಪಾರಸ್ಥರ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಸಂತೋಷ್ ಆರ್.ಎಸ್. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.