ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಾಳೆ ಉತ್ಸವದಿಗಳಿಗೆ ತೆರೆ
Friday, June 19, 2026
ಸುಬ್ರಮಣ್ಯ: ಮಹಾತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶನಿವಾರದಿಂದ ಈ ವರ್ಷದ ಉತ್ಸವದಿಗಳಿಗೆ ತೆರೆ ಬೀಳಲಿದೆ.
ಶನಿವಾರ ಬೆಳಗ್ಗೆ ಪುರುಷರಾಯ ದೈವದ ಕೋಲ ನಡೆಯಲಿರುವುದು. ಮಧ್ಯಾಹ್ನ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವರಿಗೆ ಮಹಾಭಿಷೇಕ ನಡೆದು ಮಧ್ಯಾಹ್ನ ಮಹಾಪೂಜೆ ಇರುವುದು. ರಾತ್ರಿಯ ಮಹಾಪೂಜೆ ನಂತರ ಶ್ರೀ ದೇವಳದ ಹೊರಾಂಗಣದಲ್ಲಿ ಪಾಲಕ್ಕಿ ಉತ್ಸವದೊಂದಿಗೆ ಬಂಡಿ ಉತ್ಸವ ನೆರವೇರಲಿದೆ. ತದನಂತರ ದೇವರು ಒಳಗಾಗುವ ಪ್ರತಿತಿ. ರಾತ್ರಿ ಪುರುಷರಾಯ ಬೆಟ್ಟದಲ್ಲಿ ಪರಿವಾರ ದೈವಗಳಿಗೆ ಗುಡ್ಡೆ ನಡಾವಳಿ ನಡೆಯಲಿರುವುದು. ರಾತ್ರಿಯಿಂದ ಆರಂಭವಾದ ಕೋಲಗಳು ಬೆಳಗ್ಗೆವರೆಗೂ ನಡೆಯಲಿದೆ.
ಶನಿವಾರ ಶುದ್ಧ ಷಷ್ಟಿ ಹಾಗೂ ದೇವರು ಒಳಗಾಗುವುದು ಎರಡು ಒಂದೇ ದಿನವಾದರಿಂದ ಅಧಿಕ ಸಂಖ್ಯೆಯಲ್ಲಿ ಭಕ್ತರು ಕ್ಷೇತ್ರಕ್ಕೆ ಬರುವ ನಿರೀಕ್ಷೆ ಇದೆ. ಮುಂದಿನ ದೀಪಾವಳಿಗೆ ದೇವರು ಹೊರಗೆ ಬರುವ ಕಾರಣ ಅಲ್ಲಿಯವರೆಗೆ ಹೊರಗಣ ಉತ್ಸವ ವಾಗಲಿ ಬೀದಿ ಉತ್ಸವವಾಗಲಿ ಯಾವುದು ಇರುವುದಿಲ್ಲ.