ಸುಬ್ರಹ್ಮಣ್ಯದಲ್ಲಿ ಈಶ್ವರ ಮಲ್ಪೆ ಟೀಮ್ ನಿಂದ ಉಚಿತ ಕಿವಿ ತಪಾಸಣಾ ಶಿಬಿರ
Tuesday, June 9, 2026
ಸುಬ್ರಹ್ಮಣ್ಯ: ಸುಬ್ರಹ್ಮಣ್ಯದ ಸಿ ಸಂಪುಟ ನರಸಿಂಹ ಸ್ವಾಮಿ ಮಠ ಸುಬ್ರಮಣ್ಯ ಪ್ರೆಸ್ ಕ್ಲಬ್ ರೋಟರಿ ಕ್ಲಬ್ ಸುಬ್ರಹ್ಮಣ್ಯ ಇವರು ಮಲ್ಪೆ ಇವರ ಸಹಯೋಗದೊಂದಿಗೆ ಟೀಮ್ ಈಶ್ವರ ಮಲ್ಪೆ ಇವರ ಸಹಯೋಗದೊಂದಿಗೆ ಉಚಿತ ಕಿವಿ ಶ್ರವಣ ತಪಾಸಣಾ ಶಿಬಿರ ಹಾಗೂ ಸಹಾಯಧನದ ಯಂತ್ರ ವಿತರಣಾ ಸಮಾರಂಭ ಮಂಗಳವಾರ ಶ್ರೀಮಠದ ಆವರಣದಲ್ಲಿ ನಡೆಯಿತು.
ಸುಬ್ರಹ್ಮಣ್ಯ ಶ್ರೀ ಸಂಪುಟ ನರಸಿಂಹ ಸ್ವಾಮಿ ಮಠದ ಆಡಳಿತ ಅಧಿಕಾರಿ ಸುದರ್ಶನ ಜೋಯಿಸ್ ಅವರು ಶಿಬಿರವನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿ, "ಕಣ್ಣು ಕಿವಿ,ಗಂಟಲು ಇದು ಮನುಷ್ಯನ ದೇಹದ ಅಂಗಗಳಲ್ಲಿ ಬಹಳ ಪ್ರಾಮುಖ್ಯವಾದದ್ದು. ಕಿವಿ ಕೇಳದಿದ್ದಲ್ಲಿ ಅನುಭವಿಸುವ ತೊಂದರೆ ಅದರ ನೋವು ಹೇಳತಿರದು. ಆದ್ದರಿಂದ ಕಿವಿಯ ಸುರಕ್ಷತೆ ಬಗ್ಗೆ ಹಾಗೂ ಅದರ ತಪಾಸಣೆ ಬಗ್ಗೆ ನಾವು ವಿಶೇಷ ಕಾಳಜಿ ವಹಿಸಬೇಕಾಗುತ್ತದೆ ಎಂದರು.
ಟೀಮ್ ಈಶ್ವರ ಮಲ್ಪೆ ಇದರ ಸಂಚಾಲಕರಾದ ಲವ ಬಂಗೇರ ಅವರು ಶಿಬಿರದ ಉದ್ದೇಶ ಹಾಗೂ ಸಹಾಯಧನ ಯಂತ್ರದ ಬಗ್ಗೆ ಮಾಹಿತಿ ನೀಡಿದರು.ಶಿಬಿರದ ವೈದ್ಯಾಧಿಕಾರಿ ಡಾ. ಪವನ್ ಅವರು ಕಿವಿ ಶ್ರವಣದ ತೊಂದರೆ ಅದರ ಸುರಕ್ಷತೆ ಬಗ್ಗೆ ವಿವರವಾದ ಮಾಹಿತಿ ನೀಡಿದರು. ವೇದಿಕೆಯಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ಬಿನ ನಿಯೋಜಿತ ಅಧ್ಯಕ್ಷ ರೋಹಿತ್ ಬಿಬಿ ಉಪಸ್ಥಿತರಿದ್ದರು. ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ಬಿನ ಸ್ಥಾಪಕ ಅಧ್ಯಕ್ಷ ವಿಶ್ವನಾಥ ನಡುತೋಟ ನಿರೂಪಿಸಿದ ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಪೂರ್ವ ಅಧ್ಯಕ್ಷ ಹಾಗೂ ಶಿಬಿರದ ಸಂಚಾಲಕ ಲೋಕೇಶ್ ಬಿಎನ್, ಗೋಪಾಲ ಎಣ್ಣೆ ಮಜಲ್, ಡಾ. ರವಿ ಕಕ್ಕೆ ಪದವು, ಶ್ರೀಮಠದ ಮೇಲ್ವಿಚಾರಕ ರವೀಂದ್ರ ಭಟ್, ಸುಬ್ರಹ್ಮಣ್ಯ ಪ್ರೆಸ್ ಕ್ಲಬ್ಬಿನ ಶಿವ ಭಟ್, ಸಂತೋಷ್ ನುಚಿಲ ಹಾಗೂ ಪ್ರಕಾಶ ಸುಬ್ರಹ್ಮಣ್ಯ ಹಾಜರಿದ್ದರು.
ಈ ಸಂದರ್ಭದಲ್ಲಿ ಕಿವಿ ಶ್ರವಣ ತಪಾಸಣೆಗೈದ ಹಲವು ಮಂದಿಗೆ ಸಹಾಯಧನದ ಯಂತ್ರಗಳನ್ನು ವಿತರಿಸಲಾಯಿತು.

