ಉಜಿರೆ ರುಡ್‌ಸೆಟ್‌ನಲ್ಲಿ ‘ಮೇಕಪ್ ಮಾಸ್ಟರ್ ಕ್ಲಾಸ್’ ಕಾರ್ಯಾಗಾರ

ಉಜಿರೆ ರುಡ್‌ಸೆಟ್‌ನಲ್ಲಿ ‘ಮೇಕಪ್ ಮಾಸ್ಟರ್ ಕ್ಲಾಸ್’ ಕಾರ್ಯಾಗಾರ


ಉಜಿರೆ: ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆಯುತ್ತಿರುವ ಉಜಿರೆಯ ರುಡ್‌ಸೆಟ್ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಒಂದು ದಿನದ ವೃತ್ತಿಪರ ‘ಮೇಕಪ್ ಮಾಸ್ಟರ್‌ಕ್ಲಾಸ್’ ಕಾರ್ಯಾಗಾರವನ್ನು ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ನಾತಕೋತ್ತರ ಪದವೀಧರ (ಸ್ವಾಯತ್ತ) ಕಾಲೇಜಿನ ಡೀನ್ ಡಾ. ಸೌಮ್ಯ ಉದ್ಘಾಟಿಸಿದರು.

ಬಳಿಕ ಅವರು ಮಾತನಾಡಿ, ಸಮಯ ಪಾಲನೆ, ಶಿಸ್ತು ಮತ್ತು ಹೊಸತನದ ಮನೋಭಾವ ಸದಾ ಇರಲಿ ಎಂದು ಶಿಬಿರಾರ್ಥಿಗಳಿಗೆ ಶುಭ ಕೋರಿದರು.

ಅಂತಾರಾಷ್ಟ್ರೀಯ ಪ್ರಮಾಣೀಕೃತ ಮೇಕಪ್ ಆರ್ಟಿಸ್ಟ್, ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್ ಹಾಗೂ ಮೇಕಪ್ ಎಜುಕೇಟರ್ ಆಗಿರುವ ಹಾಸನದ ಸೋಮು ಹಾಸನ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ತಮ್ಮ ದೀರ್ಘ ವೃತ್ತಿ ಅನುಭವದ ಮಾತುಗಳನ್ನು ಶಿಬಿರಾರ್ಥಿಗಳೊಂದಿಗೆ ಹಂಚಿಕೊಂಡರು.

ರುಡ್‌ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ವಿಜಯಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ತರಬೇತಿ ಪಡೆದ ನಂತರ ತಮ್ಮ ವ್ಯವಹಾರವನ್ನು ಮುಂದಕ್ಕೆ ಕೊಂಡೊಯ್ಯಲು ಬ್ಯಾಂಕ್ ಸಾಲದ ಸದುಪಯೋಗ ಪಡೆದುಕೊಳ್ಳಿ ಎಂದು ಶಿಬಿರಾರ್ಥಿಗಳಿಗೆ ಸಲಹೆ ನೀಡಿದರು.

ಅತಿಥಿ ಉಪನ್ಯಾಸಕರಾದ ಮಾಧವಿ. ಎಂ. ರೈ, ಆಶಾ ಸೋಮು ಹಾಸನ ಉಪಸ್ಥಿತರಿದ್ದರು. ರುಡ್‌ಸೆಟ್ ಸಂಸ್ಥೆಯ ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್  ಸ್ವಾಗತಿಸಿ, ಕೆ. ಕರುಣಾಕರ ಜೈನ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಂಸ್ಥೆಯ ಸಹೋದ್ಯೋಗಿಗಳಾದ ರಶ್ಮಿ, ಪ್ರವೀಣ್ ಕುಮಾರ್, ಕಾಶ್ಮೀರ ಡಿ’ಸೋಜಾ, ಸುರೇಶ, ಸಹಕರಿಸಿದ್ದರು.

ಸಭೆಯಲ್ಲಿ ಸೋಮು ಹಾಸನ್ ಅವರನ್ನು ಗೌರವಿಸಲಾಯಿತು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article