ಅಕ್ರಮ ಮರಳು ಸಾಗಾಟ ಪತ್ತೆ
Wednesday, July 15, 2026
ಬಂಟ್ವಾಳ: ಬಡಗಬೆಳ್ಳೂರು ಗ್ರಾಮದ ಪಲ್ಲಿಪಾಡಿ ನದಿಯಿಂದ ಪಿಕಫ್ ವಾಹನದಲ್ಲಿ ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿರುವುದನ್ನು ಬಂಟ್ವಾಳ ಗ್ರಾಮಾಂತರ ಪೊಲೀಸರು ಪತ್ತೆ ಹಚ್ಚಿದ್ದಾರೆ.
ಖಚಿತ ವರ್ತಮಾನದ ಮೇರೆಗೆ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿದಾಗ ಬಡಗಬೆಳ್ಳೂರು ಗ್ರಾಮದ ತರಾವು ಎಂಬಲ್ಲಿ ಮರಳು ತುಂಬಿಸಿಕೊಂಡು ಬರುತ್ತಿದ್ದ ಪಿಕಫ್ ವಾಹನವನ್ನು ಪತ್ತೆ ಹಚ್ಚಿ ಚಾಲಕನನ್ನು ಹಿಡಿದು ವಿಚಾರಿಸಿದಾಗ ಅಕ್ರಮವಾಗಿ ನದಿಯಿಂದ ಮರಳನ್ನು ಕಳವುಗೈದು ಸಾಗಾಟ ಮಾಡುತ್ತಿರುವುದನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಮರುಳು ತುಂಬಿದ ಪಿಕಪ್ ಅನ್ನು ಪೊಲೀಸರು ವಶಪಡಿಸಿದ್ದಾರೆ. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.