ಲಾವಣ್ಯರ ಹತ್ಯೆ: ತಂದೆ-ತಾಯಿಯಿಂದ ಪ್ರತಿಕ್ರಿಯೆ
ಬಂಧಿಸಬೇಡಿ, ಎನ್‌ಕೌಂಟರ್ ಮಾಡಿ...
‘ನಮಗೆ ಚೇತನ್ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಅವನು ನಮ್ಮ ಮನೆಗೆ ಬಂದಿಲ್ಲ. ಅವನು ನಮ್ಮ ದೂರದ ಸಂಬಂಧಿ ಮಾತ್ರ. ಲಾವಣ್ಯ ಅವನೊಂದಿಗೆ ಮಾತನಾಡುತ್ತಿದ್ದಳೋ ಇಲ್ಲವೋ ಎಂಬುದು ನಮಗೆ ತಿಳಿದಿರಲಿಲ್ಲ. ಅವಳು ಯಾವುದೇ ವಿಷಯವನ್ನು ನಮ್ಮಲ್ಲಿ ಹೇಳಿಲ್ಲ’. ಚೇತನ್ನನನ್ನು ಬಂಧಿಸಬೇಡಿ, ಬಂಧಿಸುವ ಬದಲು ನಡು ರಸ್ತೆಯಲ್ಲಿ ಎನ್‌ಕೌಂಟರ್ ಮಾಡಿ’ ಹೀಗೇಂದು ಆಕ್ರೋಶಿತರಾಗಿ ಆಗ್ರಹಿಸಿದವರು ಬಂಟ್ವಾಳದಲ್ಲಿ ಗುರುವಾರ ಸಂಜೆ ಹತ್ಯೆಗೀಡಾ ಲಾವಣ್ಯರ ತಂದೆ ಬಾಲಕೃಷ್ಣ ಗೌಡ.
ನಾನು ಮುಗಿಸುತ್ತೇನೆ..
ಚೇತನ್‌ನನ್ನು ಊರಿನ ಜನರೆಲ್ಲಾ ಸೇರಿ ಇಲ್ಲಿಗೆ ಕರೆತನ್ನಿ. ಆತನನ್ನು ಇಲ್ಲೇ ನಾನು ಮುಗಿಸುತ್ತೇನೆ. ನನ್ನ ಮಗಳು ಅಮಾಯಕಳು. ಆಕೆ ಯಾವತ್ತೂ ಆತನ ಬಗ್ಗೆ ನನ್ನಲ್ಲಿ ಹೇಳಿಲ್ಲ. ಆಕೆ ಯಾರ ಜೊತೆಗೂ ಮಾತನಾಡುವ ಮಗುವಲ್ಲ. ಕೆಲಸಕ್ಕೆ ಹೋಗುತ್ತೇನೆ ಎಂದಾಗ ಬೇಡ ಎಂದಿದ್ದೆ. ಮನೆಯಲ್ಲೇ ಇರುವುದಿಲ್ಲ ಕೆಲಸಕ್ಕೆ ಹೋಗುತ್ತೇನೆ ಎಂದು ಹಠ ಹಿಡಿದಿದ್ದಳು. ಅದಕ್ಕಾಗಿ ಅವಳನ್ನು ಕೆಲಸಕ್ಕೆ ಕಳುಹಿಸಿದೆ. ಅವಳು ಕೆಲಸ ಮಾಡಿ ನಮಗೆ ಜೀವನ ಸಾಗಿಸುವ ಅನಿವಾರ್ಯತೆ ಇರಲಿಲ್ಲ. ಕಲಿತ ಮಗಳು ಎನ್ನುವ ಕಾರಣಕ್ಕೆ ಕೆಲಸಕ್ಕೆ ಕಳುಹಿಸಿದೆ. ಎಲ್ಲಾ ವಿಚಾರವನ್ನು ನಮ್ಮ ಬಳಿ ಹೇಳುತ್ತಿದ್ದ ಮಗು ಅವಳು, ಯಾವುದೇ ಕಾರಣಕ್ಕೂ ಅವನನ್ನು ಸುಮ್ಮನೆ ಬಿಡಬಾರದು ಎಂದು ಕಣ್ಣೀರು ಹಾಕಿದ್ದಾರೆ ಲಾವಣ್ಯ ತಾಯಿ.