ಸರ್ಜಿಕಲ್ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ, ತಪ್ಪಿದ ಅನಾಹುತ
Tuesday, July 7, 2026
ಬಂಟ್ವಾಳ: ಬಿ.ಸಿ.ರೋಡು-ಮಂಗಳೂರು ರಾಷ್ಟ್ರೀಯ ಹೆದ್ದಾರಿಯ ಸರ್ವೀಸ್ ರಸ್ತೆಯಲ್ಲಿರುವ ಭಾರತ್ ಸ್ಟೋರ್ ಕಾಂಪ್ಲೆಕ್ಸ್‌ನ ಮೇಲಂತಸ್ತಿನಲ್ಲಿರುವ ಜೈನ್ ಸರ್ಜಿಕಲ್ ಅಂಗಡಿಯಲ್ಲಿ ಸೋಮವಾರ ರಾತ್ರಿ ಆಕಸ್ಮಿಕವಾಗಿ ಬೆಂಕಿ ಅವಘಡ ಸಂಭವಿಸಿದೆ.
ಇನ್ನೇನು ರಾತ್ರಿ ಅಂಗಡಿಯನ್ನು ಮುಚ್ಚಲು ಮುಂದಾಗುತ್ತಿದ್ದಂತೆ ಹಠಾತ್ತನೇ ಅಂಗಡಿಯೊಳಗೆ ಬೆಂಕಿ ಕಾಣಿಸಿಕೊಂಡಿದೆ, ಅಂಗಡಿ ಮಾಲಕರು ತಕ್ಷಣ ಬಂಟ್ವಾಳ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಟ್ಟಡದಲ್ಲಿ ಸಾಕಷ್ಟು ಅಂಗಡಿಗಳಿದ್ದು, ತಕ್ಷಣ ಅಗ್ನಶಾಮಕದಳದ ಸಿಬ್ಬಂದಿಗಳು ಧಾವಿಸಿ ಬಂದು ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದ ಪರಿಣಾಮ ಯಾವುದೇ ಅನಾಹುತ ಸಂಭವಿಸಿಲ್ಲ. ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಈ ಘಟನೆ ಸಂಭವಿಸಿರಬೇಕೆಂದು ಶಂಕಿಸಲಾಗಿದೆ.