ಎಕ್ಕಾರಿನಲ್ಲಿ ಅಪಘಾತದಲ್ಲಿ ಮರಣ
Monday, July 27, 2026
ಕಟೀಲು: ಖಾಸಗಿ ಬಸ್ ಹಾಗೂ ಬುಲೆಟ್ ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿ, ಹಿಂಬದಿ ಸವಾರೆ ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಕಟೀಲು-ಬಜಪೆ ರಾಜ್ಯ ಹೆದ್ದಾರಿ 67 ರ ಎಕ್ಕಾರಿನ ಕಟೀಲು ದ್ವಾರದ ಬಳಿ ಸೋಮವಾರ ಮಧ್ಯಾಹ್ನ ವೇಳೆಗೆ ಸಂಭವಿಸಿದೆ.
ಘಟನೆಯಲ್ಲಿ ಕಿನ್ನಿಗೋಳಿ ರಾಜರತ್ನಪುರ ನಿವಾಸಿ ಬಶೀರ್ (55) ಮೃತಪಟ್ಟವರು. ಹಿಂಬದಿ ಸವಾರೆ ಬಶೀರ್ ಅವರ ಪತ್ನಿ, ಗಂಭೀರ ಗಾಯಗಳೊಂದಿಗೆ ನಗರದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಶೀರ್ ಅವರು ವಿದೇಶದಲ್ಲಿದ್ದು, ಕೆಲ ವರ್ಷಗಳ ಹಿಂದೆ ಹುಟ್ಟೂರಿಗೆ ವಾಪಾಸಾಗಿದ್ದು, ಉದ್ಯಮಿಯಾಗಿದ್ದರು. ಮೃತರು ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.
ಬಜಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.