ಪ್ರೇರಣಾ ಶಾಲೆಯಲ್ಲಿ "ಕಾರ್ಗಿಲ್ ವಿಜಯ ದಿವಸ್" ದಿನಾಚರಣೆ

ಪ್ರೇರಣಾ ಶಾಲೆಯಲ್ಲಿ "ಕಾರ್ಗಿಲ್ ವಿಜಯ ದಿವಸ್" ದಿನಾಚರಣೆ


ಮೂಡುಬಿದಿರೆ: "ಭಾರತೀಯ ಯೋಧರು, ಶಸ್ತ್ರ ರಹಿತರಾಗಿದ್ದವರನ್ನು ಅವರು ಶತ್ರುಗಳೇ ಆದರೂ ಸಹಾ ಶಸ್ತ್ರ ಪ್ರಯೋಗ ಮಾಡದ ಉದಾತ್ತ ಗುಣವುಳ್ಳವರು ಎಂದು 2000 ರಲ್ಲಿ ಕಾರ್ಗಿಲ್ ಯುದ್ಧದಲ್ಲಿ ಯೋಧನಾಗಿ ಕರ್ತವ್ಯ ನಿರ್ವಹಿಸಿದ ಭಾರತೀಯ ನಿವೃತ್ತ ಯೋಧ ಎನ್.ಬಿ. ಸುಬೇದಾರ್ ಹರೀಶ್  ನುಡಿದರು.


ಅವರು ಮೂಡುಬಿದಿರೆ ಕಡಲಕೆರೆಯ ಪ್ರೇರಣಾ ಶಾಲೆಯಲ್ಲಿ  "ಕಾರ್ಗಿಲ್ ವಿಜಯ ದಿವಸ್" ದಿನಾಚರಣೆ "ಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.

"ಸಮುದ್ರ ಮಟ್ಟದಿಂದ ಸಾವಿರಾರು ಮೀಟರ್ ಎತ್ತರದಲ್ಲಿರುವ , -30 ಡಿಗ್ರಿ  ಸೆಲ್ಸಿಯಸ್ ಇರುವ ಕಾರ್ಗಿಲ್ ನಂತಹ ದುರ್ಗಮ ಪ್ರದೇಶದಲ್ಲಿ 2000 ನೇ ಇಸವಿಯಲ್ಲಿ ನಾನು ಕರ್ತವ್ಯ ನಿರ್ವಹಿಸಿ , ಭಾರತ ಮಾತೆಯ ಸೇವೆ ಮಾಡಿದ ಧನ್ಯತಾ ಭಾವ ನನಗಿದೆ . ಭಾರತಾಂಬೆಯ ಸುಪುತ್ರನಾಗಿ ಇದು ನನ್ನ ಬದ್ಧತೆಯೂ ಆಗಿತ್ತು " ಎಂದು  ಅನುಭವವನ್ನು ಹಂಚಿಕೊಂಡರು. 

ಪ್ರೇರಣಾ ಶಾಲೆಯ ಸಂಚಾಲಕ ಎಂ. ಶಾಂತರಾಮ ಕುಡ್ವರು ಅವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. 

ಪ್ರೇರಣಾ ಶಾಲೆಯ ಮುಖ್ಯ ಶಿಕ್ಷಕಿ ವತ್ಸಲಾ ರಾಜೇಶ್ ಅವರು ಮಾತನಾಡಿ, ನನ್ನ ಪತಿಯೂ ಭಾರತೀಯ ಸೇನೆಯ ಯೋಧರಾಗಿ ಕರ್ತವ್ಯ ನಿರ್ವಹಿಸಿದ ಸಂದರ್ಭದಲ್ಲಿ ತಾನೂ ಪತಿಯೊಂದಿಗೆ ದುರ್ಗಮ ಪ್ರದೇಶಗಳಲ್ಲಿ ವಾಸಿಸಿದ ಅನುಭವ ನನಗಿದೆ . ಯೋಧನ ಪತ್ನಿಯಾಗಿ ನಾನು ಸಾರ್ಥಕತೆ ಪಡೆದಿದ್ದೇನೆ " ಎಂದರು.

ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ಮೂಡುಬಿದಿರೆ ಮೂಲದ ಎನ್. ಬಿ ಸುಬೇದಾರ್ ಹರೀಶ್ ರವರನ್ನು ಪ್ರೇರಣಾ ಶಾಲೆ ಹಾಗೂ ಸೇವಾಂಜಲಿ ಎಜುಕೇಶನಲ್ ಟ್ರಸ್ಟ್ (ರಿ) ಮೂಡುಬಿದಿರೆ ವತಿಯಿಂದ ಗೌರವಿಸಲಾಯಿತು. 

ಶಾಲಾ ಶಿಕ್ಷಕಿ  ಹರ್ಷಿತಾ ಸ್ವಾಗತಿಸಿದರು. ಗ್ರೀಷ್ಮಾ ಅವರು ಕಾರ್ಯಕ್ರಮ ನಿರೂಪಿಸಿ, ಮಯೂರಿ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article