ವಿದ್ಯುತ್ ತಂತಿ ತಗುಲಿ ಹಸು ಮೃತ್ಯು

ವಿದ್ಯುತ್ ತಂತಿ ತಗುಲಿ ಹಸು ಮೃತ್ಯು


ಕಿನ್ನಿಗೋಳಿ: ವಿದ್ಯುತ್ ತಂತಿ ತಗುಲಿ ಹಸು ಮೃತಪಟ್ಟ ಮನಕಲಕುವ ಘಟನೆ ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ಕಿಲೆಂಜೂರು ಅಮಣಬೆಟ್ಟುವಿನಲ್ಲಿ ನಡೆದಿದೆ. 

ಅಮಣಬೆಟ್ಟು ಮಾಗಂದಡಿ ಶೇಖರ ಶೆಟ್ಟಿಯವರ ಹಸು ಇದಾಗಿದ್ದು, ಬೆಳಗ್ಗೆ ಹಾಲು ಕರೆದು ಮೇವಿಗಾಗಿ ಹೊರಗೆ ಕಟ್ಟಲು ಹೋದಾಗ ಅನತಿ ದೂರದಲ್ಲಿ ವಿದ್ಯುತ್ ತಂತಿ ತುಂಡಾಗಿ ಬಿದ್ದಿದ್ದು, ಹಸು ವಿದ್ಯುತ್ ತಂತಿಯನ್ನು ತುಳಿದು ಸಾವನ್ನಪ್ಪಿದೆ. 

ತಕ್ಷಣ ಲೈನ್ ಬಂದ್ ಮಾಡಿ ಸಂಬಂಧಪಟ್ಟವರಿಗೆ ಮಾಹಿತಿ ನೀಡಲಾಗಿದೆ. ಈ ಭಾಗದಲ್ಲಿನ ವಿದ್ಯುತ್ ತಂತಿ ಅತ್ಯಂತ ಹಳೆಯದಾಗಿದ್ದು, ಹಲವು ಬಾರಿ ಮೆಸ್ಕಾಂ ಅಧಿಕಾರಿಗಳಿಗೆ ದೂರು ನೀಡಲಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article