ಕರಾವಳಿಯಲ್ಲಿ ಕ್ಷೀಣಿಸಿದ ವರುಣನ ಆರ್ಭಟ: ಜುಲೈ 10ರಿಂದ ಕರಾವಳಿಯಾಧ್ಯಂತ ಮುಂಗಾರು ತೀವ್ರ ದುರ್ಬಲಗೊಳ್ಳುವ ಆತಂಕ!

ಕರಾವಳಿಯಲ್ಲಿ ಕ್ಷೀಣಿಸಿದ ವರುಣನ ಆರ್ಭಟ: ಜುಲೈ 10ರಿಂದ ಕರಾವಳಿಯಾಧ್ಯಂತ ಮುಂಗಾರು ತೀವ್ರ ದುರ್ಬಲಗೊಳ್ಳುವ ಆತಂಕ!

ಮಂಗಳೂರು: ದ.ಕ, ಉಡುಪಿ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಕಳೆದ ಕೆಲವು ದಿನಗಳಿಂದ ಅಬ್ಬರಿಸುತ್ತಿದ್ದ ಮುಂಗಾರು ಮಳೆ ಭಾನುವಾರದಿಂದ ಗಣನೀಯವಾಗಿ ಇಳಿಕೆಯಾಗಿದೆ. ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಸೇರಿದಂತೆ ಕರಾವಳಿಯಾದ್ಯಂತ ಮಳೆಯ ಆರ್ಭಟ ಬಹುತೇಕ ಕಡಿಮೆಯಾಗಿದ್ದು, ವಾತಾವರಣದಲ್ಲಿ ದಿಢೀರ್‌ ಬದಲಾವಣೆ ಕಂಡುಬಂದಿದೆ.

ಭಾನುವಾರ ಬೆಳಗ್ಗೆ ಬೆಳ್ತಂಗಡಿ, ಪುತ್ತೂರು, ಧರ್ಮಸ್ಥಳ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಗಾಳಿ ಸಹಿತ ಉತ್ತಮ ಮಳೆಯಾಗಿದ್ದರೂ, ತದನಂತರದ ಅವ˜ಯಲ್ಲಿ ಮಳೆ ಸಂಪೂರ್ಣವಾಗಿ ಕ್ಷೀಣಿಸಿತ್ತು. ದಿನದ ಬಾಕಿ ಅವ˜ಯಲ್ಲಿ ಕರಾವಳಿಯಾದ್ಯಂತ ಕೇವಲ ಮೋಡ ಮುಸುಕಿದ ವಾತಾವರಣವಷ್ಟೇ ಕಂಡುಬಂದಿದೆ. ಇನ್ನು ಸೋಮವಾರದ ಮುನ್ಸೂಚನೆಯ ಪ್ರಕಾರ, ಕಾಸರಗೋಡು ಸೇರಿದಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಬಿಸಿಲು ಹಾಗೂ ಅಲ್ಲಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಇದರೊಂದಿಗೆ ಕೆಲವು ಕಡೆಗಳಲ್ಲಿ ಗಾಳಿ ಸಹಿತ ಸಾಮಾನ್ಯ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಮೂಲಗಳು ತಿಳಿಸಿವೆ.

ಸುಳ್ಯದಲ್ಲಿ ಅತೀ ಹೆಚ್ಚು ಮಳೆ

ಭಾನುವಾರ ಬೆಳಗ್ಗಿನ ವರೆಗೆ ಜಿಲ್ಲೆಯಲ್ಲಿ ಒಟ್ಟು 19.8 ಮಿಲಿ ಮೀಟರ್‌ ಮಳೆ ದಾಖಲಾಗಿದೆ. ಜಿಲ್ಲೆಯ ಗರಿಷ್ಠ ಮಳೆ ಸುಳ್ಯದಲ್ಲಿ 32.7 ಮಿ.ಮೀ. ದಾಖಲಾಗಿದೆ. ಬೆಳ್ತಂಗಡಿ 24.4 ಮಿ.ಮೀ, ಬಂಟ್ವಾಳ 15.8 ಮಿ.ಮೀ, ಮಂಗಳೂರು11 ಮಿ.ಮೀ, ಪುತ್ತೂರು 12.9 ಮಿ.ಮೀ, ಮೂಡುಬಿದಿರೆ 7.4 ಮಿ.ಮೀ, ಕಡಬ 18.9 ಮಿ.ಮೀ, ಮೂಲ್ಕಿ 9.9 ಮಿ.ಮೀ., ಉಳ್ಳಾಲದಲ್ಲಿ 8.8 ಮಿಮಿ ಮಳೆ ವರದಿಯಾಗಿದೆ. ಜಿಲ್ಲೆಯ ಪ್ರಮುಖ ನದಿಗಳಾದ ನೇತ್ರಾವತಿ ನದಿ (ಬಂಟ್ವಾಳ) 5.5 ಮೀ, ನೇತ್ರಾವತಿ ನದಿ (ಉಪ್ಪಿನಂಗಡಿ) 25.3 ಮೀ, ಕುಮಾರಧಾರ ನದಿ (ಪುಲಿಕ್ಕುಕ್ಕು) 78.69 ಮೀ, ಗುರುಪುರ ನದಿ (ಅಡ್ಡ್ದೂರು) 2.28 ಮೀ ನೀರಿದೆ.

ಜುಲೈ 9ರಿಂದ ಮಳೆ ತೀವ್ರ ಕುಸಿತ!

ಪ್ರಸ್ತುತ ಲಭ್ಯವಿರುವ ಮುನ್ಸೂಚನೆಗಳ ಪ್ರಕಾರ, ಜುಲೈ 9ರಿಂದ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ತೀವ್ರವಾಗಿ ಕುಸಿಯುವ ಲಕ್ಷಣಗಳು ದಟ್ಟವಾಗಿವೆ. ಜುಲೈ 8ರಿಂದಲೇ ಈ ಮಳೆ ಇಳಿಕೆಯ ಪ್ರವೃತ್ತಿ ಆರಂಭವಾಗಲಿದ್ದು, ಮುಂಗಾರು ದುರ್ಬಲಗೊಳ್ಳುವುದರಿಂದ ವಾತಾವರಣದ ತಾಪಮಾನವು ಗಣನೀಯವಾಗಿ ಏರಿಕೆಯಾಗುವ ಸಾಧ್ಯತೆಯಿದೆ. ಬಂಗಾಳಕೊಲ್ಲಿಯ ಪಶ್ಚಿಮ ಬಂಗಾಳ ಕರಾವಳಿಯಲ್ಲಿ ಉಂಟಾಗಿದ್ದ ವಾಯುಭಾರ ಕುಸಿತದ ಪ್ರಭಾವದಿಂದಾಗಿ ಕರಾವಳಿ ಭಾಗದಲ್ಲಿ ಗಾಳಿತ ವೇಹ ಹೆಚ್ಚಾಗಹಲಿದೆ. ಮುಂದಿನ 2 ದಿನಗಳ ಕಾಲ ಕರಾವಳಿ ಬಾಗದ ಅಲ್ಲಲಿ  ಮಹಾಮಳೆ ಮುಂದುವರಿಯಲಿದ್ದು, ಜುಲೈ 8ರಿಂದ ಮಳೆ ತಗ್ಗಲಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article