‘ಕಾವ್ಯಾಂ ವ್ಹಾಳೊ-16’ ಕೊಂಕಣಿ ಕವಿಗೋಷ್ಠಿ

‘ಕಾವ್ಯಾಂ ವ್ಹಾಳೊ-16’ ಕೊಂಕಣಿ ಕವಿಗೋಷ್ಠಿ


ಮಂಗಳೂರು: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಅಕಾಡೆಮಿ ಸಭಾಂಗಣದಲ್ಲಿ ಜು.4 ರಂದು ‘ಕಾವ್ಯಾಂ ವ್ಹಾಳೊ-16’ ಶೀರ್ಷಿಕೆಯಡಿ ಕವಿಗೋಷ್ಠಿ ನಡೆಯಿತು.

ಮುಖ್ಯ ಅಥಿತಿಯಾಗಿ ಭಾಗವಹಿಸಿದ್ದ ಮಂಗಳೂರಿನ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಜಂಟಿ ನಿರ್ದೇಶಕ ಗೋಕುಲ್ ದಾಸ್ ನಾಯಕ್ ಮಾತಾನಾಡಿ, ‘ರವಿ ಕಾಣದನ್ನು ಕವಿ ಕಂಡ’ ಎಂಬ ಮಾತಿನಂತೆ ಒಬ್ಬ ಕವಿಯ ದೃಷ್ಟಿಕೋನವು ಸಾಗರದ ಆಳವನ್ನೂ ಮೀರಿದ್ದು. ಕವಿ ಹಾಗೂ ಕವಿತೆಯ ಮಹತ್ವವನ್ನು ವರ್ಣಿಸಲು ಈ ಮಾತು ಉತ್ತಮ ನಿದರ್ಶನ. ಯಾವುದೇ ಒಂದು ವಿಷಯದ ಬಗೆಗಿನ ಸಾಹಿತ್ಯವು ಅದರ ಬರಹಗಾರನ ಅದ್ಭುತ ದೃಷ್ಟಿಕೋನವನ್ನು ನಿರೂಪಿಸುತ್ತದೆ. ಇಂತಹ ಅನೇಕ ತೆರೆ-ಮರೆಯ, ಹಿರಿಯ-ಕಿರಿಯ ಸಾಹಿತಿ, ಕವಿ ಹಾಗೂ ಬರಹಗಾರರನ್ನು ಗುರುತಿಸುವಂತಹ ಕಾರ್ಯವನ್ನು ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಮಾಡುತ್ತಿರುವುದು ಖುಷಿಯ ವಿಚಾರವೆಂದು ಅಕಾಡೆಮಿಯ ಅಧ್ಯಕ್ಷರು ಹಾಗೂ ಸದಸ್ಯರನ್ನು ಅಭಿನಂದಿಸಿದರು.

ಈ ಸಂದರ್ಭದಲ್ಲಿ ಕೊಂಕಣಿಯ ಹಿರಿಯ ಬ್ರಾಸ್ ಬ್ಯಾಂಡ್ ಕಲಾವಿದ ಮೆಲ್ವಿನ್ ಡಿಸೋಜಾ ಅವರನ್ನು ಸನ್ಮಾನಿಲಾಯಿತು.

ಖ್ಯಾತ ಕವಯಿತ್ರಿ ಡಾ. ಡಿಂಪಲ್ ಜೆನಿಫರ್ ಫೆರ್ನಾಂಡಿಸ್ ಅವರು ಕವಿಗೋಷ್ಟಿಯನ್ನು ನಡೆಸಿ, ಕವಿ, ಕವಿತೆಗಳ ಬಗ್ಗೆ ಸವಿಸ್ತಾರ ವಿವರಗಳನ್ನು ನೀಡಿದರು.

ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ, ಪ್ರಾಸ್ತಾವಿಕವಾಗಿ ಮಾತಾನಾಡಿ, ಸ್ವಾಗತಿಸಿದರು.

ಈ ಸಂದರ್ಭದಲ್ಲಿ ಎಡಿ ಕಾಡ್ದೊಸ್ ತಾಕೊಡೆ, ಜಯಶ್ರೀ ಶೆಣೈ, ರಾಮಚಂದ್ರ ಪೈ, ಜೆನೆಲಿಯಾ ಡಿ ಅಲ್ಮೇಡಾ, ಗ್ರೇಶಿಯನ್ ಪಾಲಡ್ಕ, ಸೋನಿಯಾ ಡಿಕೋಸ್ತ, ರಾಘವೇಂದ್ರ ಪ್ರಭು ಕರ್ವಾಲು, ಜ್ಯೂಲಿಯೆಟ್ ಫೆರ್ನಾಂಡಿಸ್, ರೇಮಂಡ್ ಡಿಕೂನಾ, ತಾಕೊಡೆ, ಅಲನಿ ಡಿಸೋಜ, ವಿಲಿಯಂ ಮಾಡ್ತಾ ಅಲ್ಲಿಪಾದೆ ಮತ್ತು ಅಜಯ್ ಡಿಸೋಜ ಇವರು ತಮ್ಮ ಕವಿತೆಗಳನ್ನು ವಾಚಿಸಿದರು. 

ಅಕಾಡೆಮಿ ಸದಸ್ಯೆ ಸಪ್ನಾ ಮೇ ಕ್ರಾಸ್ತಾ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು. ಸದಸ್ಯರಾದ ರೊನಾಲ್ಡ್ ಕ್ರಾಸ್ತಾ, ನವೀನ್ ಲೋಬೊ ಉಪಸ್ಥಿತರಿದ್ದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article