ಅರಂಬೂರು ಭಾಗದಲ್ಲಿ ಕಾಡಾನೆ ಹಾವಳಿ: ಕೃಷಿ ಹಾನಿ
Sunday, July 5, 2026
ಸುಳ್ಯ: ಸುಳ್ಯ ನಗರ ಸಮೀಪದ ಅರಂಬೂರು ಭಾಗದಲ್ಲಿ ಮತ್ತೆ ಕಾಡಾನೆ ಹಾವಳಿ ತೀವ್ರಗೊಂಡಿದೆ. ಶನಿವಾರ ರಾತ್ರಿ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಸ್. ಸಂಶುದ್ದೀನ್ ಅವರ ತೋಟಕ್ಕೆ ದಾಳಿ ಮಾಡಿದ ಕಾಡಾನೆಗಳು ಬಾಳೆ, ತೆಂಗು ಮತ್ತಿತರ ಕೃಷಿಗಳಿಗೆ ಹಾನಿ ಮಾಡಿದೆ.
ಮನೆ ಸಮೀಪ ಕಾಡಾನೆಗಳು ಬಂದಿರುವುದು ತಿಳಿದು ಸಂಶುದ್ದೀನ್ ಅವರು ಆನೆ ಕಾರ್ಯಪಡೆಗೆ ಮಾಹಿತಿ ನೀಡಿದರು. ಸ್ಥಳಕ್ಕೆ ಆಗಮಿಸಿದ ಆನೆ ಕಾರ್ಯಪಡೆ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ಆನೆಗಳನ್ನು ಕಾಡಿಗೆ ಅಟ್ಟಿದರು. ಅರಂಬೂರು ಭಾಗದಲ್ಲಿ ಮತ್ತೆ ಕಾಡಾನೆಗಳ ಹಾವಳಿ ತೀವ್ರಗೊಂಡಿದೆ ಎಂದು ಕೃಷಿಕರು ಹೇಳುತ್ತಾರೆ.