ಜು.6 ರಿಂದ ಯೋಗಾಸನ ಶಿಬಿರ
Wednesday, July 1, 2026
ಮಂಗಳೂರು: ಮಂಗಳೂರಿನ ಮಂಗಳಾದೇವಿಯಲ್ಲಿರುವ ರಾಮಕೃಷ್ಣ ಮಠದಲ್ಲಿ ಜುಲೈ 6 ರಿಂದ ಸಂಜೆ 5 ಗಂಟೆಯಿಂದ 6.30 ರವರೆಗೆ ಯೋಗಾಸನ ಶಿಬಿರ ನಡೆಯಲಿದೆ.
ಯೋಗಗುರು ಗೋಪಾಲಕೃಷ್ಣ ದೇಲಂಪಾಡಿಯವರು ಯೋಗಾಸನ, ಮುದ್ರೆಗಳು, ಕ್ರಿಯೆಗಳು, ಪ್ರಾಣಾಯಾಮ, ಸೂರ್ಯನಮಸ್ಕಾರ, ಧ್ಯಾನ ಮಾಡುವ ವಿಧಾನ ತಿಳಿಸಿಕೊಡುವರು.
ಆಸಕ್ತರು ತಮ್ಮ ಹೆಸರುಗಳನ್ನು ಆಶ್ರಮದ ಕಾರ್ಯಾಲಯದಲ್ಲಿ ನೋಂದಾಯಿಸಬಹುದು. ಹೆಚ್ಚಿನ ವಿವರಗಳಿಗಾಗಿ ದೂ.ಸಂ.: 0824-2414412 ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.


