ಎಸ್‌ಐಆರ್ ಪ್ರಕ್ರಿಯೆಗೆ ವೇಗ ನೀಡಿ, ಬಿಎಲ್‌ಒ ಜತೆ ಫಾರಂ ಭರ್ತಿ ಮಾಡಲು ತಜ್ಞರನ್ನು ಕಳುಹಿಸಿ: ಐವನ್ ಡಿಸೋಜಾ

ಎಸ್‌ಐಆರ್ ಪ್ರಕ್ರಿಯೆಗೆ ವೇಗ ನೀಡಿ, ಬಿಎಲ್‌ಒ ಜತೆ ಫಾರಂ ಭರ್ತಿ ಮಾಡಲು ತಜ್ಞರನ್ನು ಕಳುಹಿಸಿ: ಐವನ್ ಡಿಸೋಜಾ


ಮಂಗಳೂರು: ದ.ಕ. ಜಿಲ್ಲೆಯಾದ್ಯಂತ ಎಸ್‌ಐಆರ್ ಪ್ರಕ್ರಿಯೆ ಆಮೆಗತಿಯಲ್ಲಿ ಸಾಗಿದ್ದು, ಅದಕ್ಕೆ ವೇಗ ತುಂಬಬೇಕಾಗಿದೆ. ಈಗಿನ ಪರಿಸ್ಥಿತಿಯಲ್ಲಿ ಬಿಎಲ್‌ಒಗಳು ಚುನಾವಣಾ ಆಯೋಗದ ನಿರ್ದೇಶನದಂತೆ ಪ್ರತಿಯೊಬ್ಬ ಮತದಾರರ ಮನೆಗೆ ತಲುಪಲು ಸಾಧ್ಯವಾಗದು. ಜತೆಗೆ ಕೆಲವೊಂದು ಬಿಎಲ್‌ಒಗಳಿಗೆ ಫಾರಂ ಭರ್ತಿ ಮಾಡುವ ಜ್ಞಾನವೂ ಇಲ್ಲವಾಗಿದೆ. ಅದಕ್ಕಾಗಿ ಅವರ ಜತೆ ತಜ್ಞರನ್ನು ಕಳುಹಿಸುವ ಮೂಲಕ ಎಸ್‌ಐಆರ್ ಪ್ರಕ್ರಿಯೆ ಜಿಲ್ಲೆಯಲ್ಲಿ ಸಮರ್ಪಕವಾಗಿ ನಡೆಯುವಂತೆ ಜಿಲ್ಲಾಧಿಕಾರಿಗಳು ಕ್ರಮ ವಹಿಸಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಆಗ್ರಹಿಸಿದರು. 

ತನ್ನ ಕಚೇರಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಲ್ಲಾ ಮನೆಗಳಗೆ ಎನ್ಯುಮರೇಶನ್ ಫಾರಂ ನೀಡಲಾಗಿದೆ ಎಂದು ಜಿಲ್ಲಾಡಳಿತ ಹೇಳಿದೆ. ಆದರೆ ವಾಸ್ತವದಲ್ಲಿ ಐದು ಮಂದಿ ಮತದಾರರಿದ್ದಲ್ಲಿ ಮೂವರಿಗೆ ಮಾತ್ರವೇ ಎನ್ಯುಮರೇಶನ್ ಫಾರಂ ನೀಡಲಾಗಿದೆ. ಇವೆಲ್ಲವೂ ಅನುಮಾನಕ್ಕೆ ಕಾರಣವಾಗುತ್ತದೆ. ಮತದಾರರ ಪಟ್ಟಿಯಲ್ಲಿನ ಫೋಟೋ ಅಪ್ಗ್ರೇಡ್ ಮಾಡಲು ಅನುಕೂಲವಾಗುವಂತೆ ಬಿಎಲ್‌ಒಗಳಿಗೆ ಫೋಟೋ ಕ್ಯಾಪ್ಚರ್ ಆಯಪ್ ಒದಗಿಸಿರುವುದಾಗಿ ಚುನಾವಣಾ ಆಯೋಗ ತಿಳಿಸಿದೆ. ಆದರೆ ಜಿಲ್ಲೆಯ ಅಪರ ಜಿಲ್ಲಾಧಿಕಾರಿಯವರು ನೀಡಿರುವ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ ಅದರ ವ್ಯವಸ್ಥೆ ಆಗಿಲ್ಲ ಎನ್ನಲಾಗಿದೆ. ಫಾರಂಗಳನ್ನು ಕನ್ನಡದ ಜತೆಗೆ ಆಂಗ್ಲ ಭಾಷೆಯಲ್ಲಿಯೂ ನೀಡುವಂತೆ ಜಿಲ್ಲಾಧಿಕಾರಿಗೆ ತಿಳಿಸಲಾಗಿದ್ದು, ಕ್ರಮ ವಹಿಸುವುದಾಗಿ ತಿಳಿಸಿದ್ದಾರೆ. 

ಮ್ಯಾಪಿಂಗ್ನಲ್ಲಿ ಬಿಟ್ಟು ಹೋಗಿರುವ ಜಿಲ್ಲೆಯ 1.92 ಲಕ್ಷ ಮತದಾರರು ಕೂಡಾ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯ ಅರ್ಹತೆ ಹೊಂದಿದ್ದು, ಅದಕ್ಕೆ ಅವಕಾಶ ಕಲ್ಪಿಸಬೇಕು. ಹೊಸ ಮತದಾರರನ್ನು ಸೇರಿಸುವ ಹಾಗೂ ಮೃತಪಟ್ಟವರು ಮತ್ತು ಬೇರೆಡೆ ನೆಲೆಸಿರುವವರ ಹೆಸರನ್ನು ಡಿಲೀಟ್ ಮಾಡುವ ಪ್ರಕ್ರಿಯೆಯೂ ನಡೆಯಬೇಕು ಎಂದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article