ಕ್ರಿಕೆಟ್ ಗುರು ನಿಧನ
Saturday, July 11, 2026
ಮಂಗಳೂರು: ಅಂಡರ್ ಆರ್ಮ್ ಕ್ರಿಕೆಟ್‌ನ ರಾಯಭಾರಿ ಎಂದೇ ಖ್ಯಾತಿ ಗಳಿಸಿದ್ದ ಮಿತ್ರ ಯಂಗ್ ಫ್ರೆಂಡ್ಸ್ ಉರ್ವ ತಂಡದ ಮಾಲೀಕ ತಿಲಕ್ ಗುರು ನಿಧನರಾದರು.
ತಿಲಕ್ ಗುರು ಅವರು, ಅಂಡರ್ ಆರ್ಮ್ ಕ್ರಿಕೆಟ್ ನ ಅಂಬಾಸಿಡರ್ ಎಂದು ಗುರುತಿಸಿಕೊಂಡಿದ್ದರು.
ಅವರು ನಿರಂತರವಾಗಿ ಉರ್ವ ಮೈದಾನದಲ್ಲಿ ನಡೆಯುವ ಕ್ರಿಕೆಟ್ ಪಂದ್ಯಾಟಗಳ ಮೇಲ್ವಿಚಾರಕರಾಗಿ, ಪಂದ್ಯಾಟದ ಪೋಷಕರಾಗಿ, ಸ್ವ ತಂಡದ ನಾಯಕರಾಗಿ ಕಾರ್ಯಾಚರಿಸುತ್ತಿದ್ದರು. ಅಂಡರ್ ಆರ್ಮ್ ಕ್ರಿಕೆಟಿಗೆ ನೇರ ಪ್ರಸಾರದ ಆಲೋಚನೆಯನ್ನು ಕೊಟ್ಟು ಅಂಡರ್ ಕ್ರಿಕೆಟ್ ನ್ನು ಜನಪ್ರಿಯಗೊಳಿಸಿದ ಖ್ಯಾತಿ ಅವರದ್ದು.
ತಿಲಕ್ ಗುರು ಅವರು ಅಂಡರ್ ಆರ್ಮ್ ಆಟಗಾರರಿಗೆ ದಿನ ಭತ್ಯೆಯ ಆಧಾರದಲ್ಲಿ ಸಂಭಾವನೆ ನೀಡಲು ನೇತೃತ್ವ ನೀಡಿದ್ದರು. ಇನ್ನು ಕ್ರಿಕೆಟ್ ಹೊರತಾಗಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಯೋಜಕ, ಆಯೋಜಕರಾಗಿಯೂ ಅವರು ಪ್ರಸಿದ್ಧಿಯನ್ನು ಪಡೆದಿದ್ದರು.