ಶ್ರೀ ಕ್ಷೇತ್ರ ಕದ್ರಿಯಲ್ಲಿ ಮಳೆಗಾಗಿ "ಪರ್ಜನ್ಯ ಜಪ" ಪಾರಾಯಣ
ಜ್ಯೋತಿಷಿ ರವಿ ಅಡಿಗ ಚಾಲನೆ ನೀಡಿದರು. ಅರ್ಚಕ ಅರುಣ್ ಅಡಿಗ ದೇವತಾ ಪೂಜೆ ನೆರವೇರಿಸಿದರು, ಅರ್ಚಕರಾದ ರಾಘವೇಂದ್ರ ಅಡಿಗ, ರಾಘವೇಂದ್ರ ಭಟ್, ವೇ.ಮೂ. ಶ್ರೀಕರ ಭಟ್ ಹಾಗೂ ಪಯ ಶ್ರೀಕೃಷ್ಣ ಭಟ್ ನೇತೃತ್ವದಲ್ಲಿ ಕಾರ್ಯಕ್ರಮ ಆರಂಭಗೊಂಡು, ಗುರು ವಂದನೆ, ಗಣಪತಿ ಪ್ರಾರ್ಥನೆ, ಸರಸ್ವತಿ ಪ್ರಾರ್ಥನೆ, ಅಥರ್ವ ಶೀರ್ಷ, ಪರ್ಜನ್ಯ ಜಪ, ರುದ್ರ ಪಾರಾಯಣ, ವಿಷ್ಣು ಸಹಸ್ರನಾಮ, ಐಕ್ಯ ಮಂತ್ರಗಳೊಂದಿಗೆ ಪ್ರಾರ್ಥನೆ ಸಲ್ಲಿಸಲಾಯಿತು.
ವಿಪ್ರ ಬಂಧುಗಳೆಲ್ಲರೂ ಸಾಂಪ್ರದಾಯಿಕ ಉಡುಗೆಯೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಪ್ರಾಸ್ತಾವಿಕವಾಗಿ ಮಾತನಾಡಿ ನಾಡಿನಾದ್ಯಂತ ಮಳೆಯ ಕೊರತೆ ಉಂಟಾಗಿದ್ದು, ಬರಗಾಲದ ಭೀತಿಯಿಂದ ಪಾರು ಮಾಡುವಂತೆ ಸಾಮೂಹಿಕವಾಗಿ ಪ್ರಾರ್ಥಿಸೋಣ ಎಂದರು.
ಕುಡುಪು ದೇವಳದ ಶ್ರೀಷ ಸಾಮಗರು ಕೆರೆಯ ನೀರಲ್ಲೇ ಕುಳಿತು ಪಾರಾಯಣ ನೆರವೇರಿಸಿದರು.
ರಘುರಾಮ ಲ್ಯಾಂಡ್ ಲಿಂಕ್ಸ್ ,ರಾಮಚಂದ್ರ ಭಟ್ ಎಲ್ಲೂರು, ಸುಧಾಕರ ರಾವ್ ಪೇಜಾವರ , ಡಾ.ರಾಜೇಂದ್ರ ಪ್ರಸಾದ್, ಉದಯ ಕುಮಾರ್, ಗುರುರಾಜ್ ಎಂ.ಎಸ್, ಶ್ರೀರಂಗ ಐತಾಳ್, ರಾಮಕೃಷ್ಣ ರಾವ್ ಕದ್ರಿ, ಶ್ರೀಕೃಷ್ಣ ಭಟ್ ಕದ್ರಿ, ಗುರುಪ್ರಸಾದ್ ಕಡಂಬಾರು, ಗಣೇಶ್ ಹೆಬ್ಬಾರ್, ತರುಣ್ ಠಾಕರ್, ವೆಂಕಟೇಶ ನಾವಡ, ರಾಮ ಹೊಳ್ಳ, ಶೇಷಾದ್ರಿ ಭಟ್, ಪೂರ್ಣಿಮಾ ರಾವ್ ಪೇಜಾವರ, ಶಶಿಪ್ರಭಾ ಐತಾಳ್ ಇವರೇ ಮೊದಲಾದವರಿದ್ದರು.