ಫಿಲೋಮಿನಾ ವಿದ್ಯಾರ್ಥಿ ದಿಗಂತ್ ರಾಷ್ಟ್ರೀಯ ಮಟ್ಟ ಸಾಧನೆ
Friday, July 17, 2026
ಪುತ್ತೂರು: ಪುತ್ತೂರಿನ ಸಂತ ಫಿಲೋಮಿನಾ ಸ್ವಾಯತ್ತ ಕಾಲೇಜಿನ ಎನ್‌ಸಿಸಿ ನೌಕಾದಳ ವಿಭಾಗದ ಕೆಡೆಟ್ ಕ್ಯಾಪ್ಟನ್ ದಿಗಂತ್ ವಿ. ಎಸ್. ಅವರು ಪ್ರತಿಷ್ಠಿತ ಆಲ್ ಇಂಡಿಯಾ ನೌ ಸೈನಿಕ್ ಕ್ಯಾಂಪ್ 2026ರಲ್ಲಿ ಎರಡು ಪದಕಗಳನ್ನು ಗೆದ್ದು ಕಾಲೇಜಿಗೆ ರಾಷ್ಟ್ರೀಯ ಮಟ್ಟ ಕೀರ್ತಿ ತಂದಿದ್ದಾರೆ.
ಮಹಾರಾಷ್ಟ್ರದ ಲೋಣಾವಾಲಾದ ಐಎನ್‌ಎಸ್ ಶಿವಾಜಿಯಲ್ಲಿ ಜುಲೈ 1ರಿಂದ 12ರವರೆಗೆ ನಡೆದ ಈ ರಾಷ್ಟ್ರೀಯ ಶಿಬಿರದಲ್ಲಿ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯವನ್ನು ಪ್ರತಿನಿಧಿಸಿದ ದಿಗಂತ್ ಅವರು ದೇಶದ ವಿವಿಧ ರಾಜ್ಯಗಳ ಅತ್ಯುತ್ತಮ ಎನ್‌ಸಿಸಿ ನೌಕಾದಳ ವಿಭಾಗದ ಕೆಡೆಟ್ ಗಳೊಂದಿಗೆ ಸ್ಪರ್ಧಿಸಿದರು. ದೈಹಿಕ ಸಾಮರ್ಥ್ಯ, ಶಿಸ್ತು ಮತ್ತು ವೃತ್ತಿಪರ ಕೌಶಲ್ಯವನ್ನು ಪ್ರದರ್ಶಿಸಿದ ಅವರು ಕ್ರಾಸ್ ಕಂಟ್ರಿ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಹಾಗೂ ಸರ್ವಿಸ್ ಸಬ್ಜೆಕ್ಟ್ ಪರೀಕ್ಷೆಯಲ್ಲಿ ಕಂಚಿನ ಪದಕ ಪಡೆದರು. ಅವರಿಗೆ ಎನ್‌ಸಿಸಿ ನೌಕಾದಳ ವಿಭಾಗದ ಸಹಾಯಕ ಎನ್ಸಿಸಿ ಅಧಿಕಾರಿ ಸಬ್ ಲೆಫ್ಟಿನೆಂಟ್ ತೇಜಸ್ವಿ ಭಟ್ ಅವರು ಮಾರ್ಗದರ್ಶನ ಹಾಗೂ ತರಬೇತಿ ನೀಡಿದ್ದಾರೆ. ವಿದ್ಯಾರ್ಥಿಯ ಈ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರಾದ ವಂ. ಆಂಟನಿ ಪ್ರಕಾಶ್ ಮೊಂತೆರೊ, ಅಧ್ಯಾಪಕ ವೃಂದ ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.