ಶಕ್ತಿ ರೆಸಿಡೆನ್ಸಿಯಲ್ ಶಾಲೆಯಲ್ಲಿ ಗುರುಪೂರ್ಣಿಮಾ ದಿನಾಚರಣೆ

ಶಕ್ತಿ ರೆಸಿಡೆನ್ಸಿಯಲ್ ಶಾಲೆಯಲ್ಲಿ ಗುರುಪೂರ್ಣಿಮಾ ದಿನಾಚರಣೆ


ಮಂಗಳೂರು: ಮಂಗಳೂರಿನ ಶಕ್ತಿನಗರದಲ್ಲಿರುವ ಶಕ್ತಿ ರೆಸಿಡೆನ್ಸಿಯಲ್ ಶಾಲೆಯಲ್ಲಿ ಗುರುಪೂರ್ಣಿಮಾ ದಿನಾಚರಣೆಯನ್ನು ಸಂಪ್ರದಾಯಬದ್ಧವಾಗಿ ಅತಿಥಿಗಳ ಪಾದ ಪೂಜೆಯನ್ನು ಮಾಡುವ ಮೂಲಕ ಆಚರಿಸಲಾಯಿತು. 


ಮುಖ್ಯ ಅತಿಥಿ ಶಾರದಾ ವಿದ್ಯಾಲಯದ ನಿವೃತ್ತ ಶಿಕ್ಷಕಿ ಸುನೀತಾ ಮಡಿ ಅವರು ದೀಪವನ್ನು ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದ ಅವರು, ಗುರು ಎಂದರೆ ಕೇವಲ ಪಾಠ ಕಲಿಸುವ ವ್ಯಕ್ತಿಯಲ್ಲ, ಜೀವನದ ದಾರಿಯನ್ನು ತೋರಿಸುವ ಮಾರ್ಗದರ್ಶಕ ಹಾಗೂ ಗುರುತಿಸುವ ಮಾರ್ಗದರ್ಶಕ. ಬಾಲ್ಯದಿಂದಲೇ ಗುರುಗಳು ನಮ್ಮನ್ನು ಸರಿಯಾದ ದಾರಿಯಲ್ಲಿ ನಡೆಸಿ, ನಮ್ಮ ಗುರಿಯನ್ನು ತಲುಪಲು ಪ್ರೇರೇಪಿಸುತ್ತಾರೆ ಎಂದು ಹೇಳಿದರು.


ಈ ಸಂದರ್ಭದಲ್ಲಿ ಅವರು ಭಾರತದ ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಜೀವನವನ್ನು ಉದಾಹರಣೆಯಾಗಿ ವಿವರಿಸಿ, ಒಬ್ಬ ಶಿಕ್ಷಕರು ಕಲಾಂ ಅವರಲ್ಲಿ ಕನಸು ಕಾಣುವ ಶಕ್ತಿಯನ್ನು ಜಾಗೃತಗೊಳಿಸಿದ ಪರಿಣಾಮ, ಅವರು ಮುಂದೆ ಭಾರತದ ‘ಮಿಸೈಲ್ ಮ್ಯಾನ್’ ಆಗಿ ಬೆಳೆದದ್ದು ನಮಗೆಲ್ಲ ಸ್ಫೂರ್ತಿ ನೀಡುತ್ತದೆ. ಅದೇ ರೀತಿ, ಚಾಣಕ್ಯ ಅವರ ಕಥೆಯನ್ನು ಉಲ್ಲೇಖಿಸಿ, ಅವರ ಮಾರ್ಗದರ್ಶನ ಮತ್ತು ದೂರದೃಷ್ಟಿಯ ಫಲವಾಗಿ ಚಂದ್ರಗುಪ್ತ ಮೌರ್ಯ ಮಹಾನ್ ಸಾಮ್ರಾಟನಾಗಿ ಹೊರಹೊಮ್ಮಿದನು ಎಂದು ವಿವರಿಸಿದರು.


ತಮ್ಮ ಅನುಭವವನ್ನು ಹಂಚಿಕೊಂಡ ಅವರು, ಸಾವಿರಾರು ಶಿಕ್ಷಕರೊಂದಿಗೆ ಕೆಲಸ ಮಾಡಿರುವುದಾಗಿ ಹಾಗೂ ಹಲವು ತಲೆಮಾರುಗಳ ವಿದ್ಯಾರ್ಥಿಗಳನ್ನು ಕಂಡಿರುವುದಾಗಿ ಹೇಳಿದ ಅವರು, ಇಂದಿಗೂ ತಾವು ಹೊಸ ವಿಷಯಗಳನ್ನು ಕಲಿಯುತ್ತಿರುವ ಜೀವನ ಪಯಂತದ ವಿದ್ಯಾರ್ಥಿನಿಯೇ ಆಗಿದ್ದೇನೆ ಎಂದು ತಿಳಿಸಿ, ‘ಕುತೂಹಲವನ್ನು ಎಂದಿಗೂ ಕಳೆದುಕೊಳ್ಳಬೇಡಿ, ಕಲಿಯುವುದನ್ನು ಎಂದಿಗೂ ನಿಲ್ಲಿಸಬೇಡಿ’ ಎಂಬ ಸಂದೇಶ ನೀಡಿದರು.


ಶಿಕ್ಷಕಿಯಾಗಿ, ಪೋಷಕರಾಗಿ ಹಾಗೂ ಜೀವನಪಯಂತ ಕಲಿಯುವ ವ್ಯಕ್ತಿಯಾಗಿ ಅನೇಕ ಅನುಭವಗಳನ್ನು ಹೊಂದಿರುವುದಾಗಿ ತಿಳಿಸಿದ ಅವರು, ತಮ್ಮ ಶಿಕ್ಷಕ ವೃತ್ತಿಯ ಆರಂಭದಲ್ಲಿ ತಂತ್ರಜ್ಞಾನ ಅಥವಾ ಕೃತಕ ಬುದ್ಧಿಮತ್ತೆ (ಎಐ) ಇರಲಿಲ್ಲ. ಆದರೆ ಇಂದಿನ ಯುಗದಲ್ಲಿ ಎಐ ಸೇರಿದಂತೆ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ಆದರೂ, ‘ತಂತ್ರಜ್ಞಾನ ಬದಲಾಗಬಹುದು, ಆದರೆ ಮೂಲಭೂತ ಮೌಲ್ಯಗಳು ಎಂದಿಗೂ ಬದಲಾಗುವುದಿಲ್ಲ. ಶಿಕ್ಷಕರು ಮಕ್ಕಳಿಗೆ ಏನು ಯೋಚಿಸಬೇಕು ಎಂದು ಅಲ್ಲ, ಹೇಗೆ ಯೋಚಿಸಬೇಕು ಎಂಬುದನ್ನು ಕಲಿಸುತ್ತಾರೆ’ ವಿದ್ಯಾರ್ಥಿಗಳಿಗೆ ‘ಹಣವನ್ನು ಬೆನ್ನಟ್ಟಬೇಡಿ, ಜ್ಞಾನವನ್ನು ಬೆನ್ನಟ್ಟಿ’ ಎಂದು ಸಲಹೆ ನೀಡಿದರು. 


ಪ್ರೌಢಶಾಲೆಯ ನಂತರ ವೃತ್ತಿ ಆಯ್ಕೆ ಮಾಡುವ ಮುನ್ನ ತಮ್ಮ ಆಸಕ್ತಿಯನ್ನು ಮೊದಲು ಕಂಡುಕೊಳ್ಳಬೇಕು. ಯಾವ ವಿಷಯದ ಬಗ್ಗೆ ಹೆಚ್ಚು ಕಾಳಜಿ ಮತ್ತು ಆಸಕ್ತಿ ಹೊಂದಿದ್ದೀರೋ ಅದನ್ನೇ ಜೀವನದ ಗುರಿಯಾಗಿಸಿಕೊಳ್ಳಿ ಎಂದು ತಿಳಿಸಿದರು.


‘ಯಶಸ್ಸು ಎಂಬುದು ನಮ್ಮ ಪರಿಶ್ರಮದ ಉಪಫಲ. ಆದ್ದರಿಂದ ಶ್ರೇಷ್ಠತೆಯನ್ನು ಸಾಧಿಸಲು ಸದಾ ಪ್ರಯತ್ನಿಸಿ’ ಎಂದು ಕರೆ ನೀಡಿದರು. ಇತರರೊಂದಿಗೆ ತಮ್ಮನ್ನು ಹೋಲಿಸಿಕೊಳ್ಳಬೇಡಿ. ಪ್ರತಿಯೊಬ್ಬರ ಜೀವನ ಪಯಣ ವಿಭಿನ್ನವಾಗಿದೆ. ನಿಮ್ಮ ಸ್ಪರ್ಧೆ ನಿಮ್ಮ ಸಹಪಾಠಿಗಳೊಂದಿಗೆ ಅಲ್ಲ, ನಿಮ್ಮ ನಿನ್ನೆಯ ವ್ಯಕ್ತಿತ್ವದೊಂದಿಗೆ ಇರಬೇಕು ಎಂದು ಹೇಳಿದರು. ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮತ್ತು ಪಠ್ಯೇತರ ಚಟುವಟಿಕೆಗಳ ನಡುವೆ ಸಮತೋಲನ ಕಾಪಾಡಿಕೊಳ್ಳಬೇಕು. ಶಿಸ್ತು, ಉದ್ದೇಶಪೂರ್ಣ ಜೀವನ ಹಾಗೂ ನಿರಂತರ ಕಲಿಕೆಯ ಮನೋಭಾವವನ್ನು ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.


ಪ್ರತಿಯೊಬ್ಬ ವಿದ್ಯಾರ್ಥಿಯೂ ತಮ್ಮ ಗುರುಗಳನ್ನು ಗೌರವಿಸಿ, ಅವರ ಮಾರ್ಗದರ್ಶನದಲ್ಲಿ ಉತ್ತಮ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಲಿ ಎಂದು ಹಾರೈಸಿದರು.

ಶಕ್ತಿ ವಿದ್ಯಾ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ್ ಕೆ. ಮಾತನಾಡಿ, ‘ನಮಗೆ ಸಂಸ್ಕಾರ ಕೊಟ್ಟ ತಂದೆ ತಾಯಿಯರಿಗೆ, ಶಾಲೆಯಲ್ಲಿ ವಿದ್ಯೆಯನ್ನು ಹೇಳಿಕೊಟ್ಟ ಶಿಕ್ಷಕರು ಎಲ್ಲರ ಪಾದ ಪೂಜೆ ಮಾಡುವ ಮೂಲಕ ಅವರಿಗೆ ಗೌರವವನ್ನು ಸೂಚಿಸುತ್ತೇವೆ. ಇದು ನಮ್ಮ ದೇಶದ ಸನಾತನ ಸಂಪ್ರದಾಯವಾಗಿದೆ. ನಮ್ಮ ದೇಶದಲ್ಲಿ ಗುರುಗಳಿಗೆ ವಿಶೇಷವಾದ ಸ್ಥಾನವನ್ನು ನೀಡಿ ಗೌರವಿಸಲಾಗಿದೆ. ನಾವೆಲ್ಲರೂ ಗುರುಗಳ ಆಶೀರ್ವಾದಕ್ಕೆ ಪಾತ್ರರಾಗೋಣ ಎಲ್ಲರಿಗೂ ಗುರುಪೂರ್ಣಿಮಾ ದಿನಾಚರಣೆಯ ಶುಭಾಶಯಗಳನ್ನು ತಿಳಿಸಿದರು.

ಈ ಸಂದರ್ಭದಲ್ಲಿ ಸುನೀತಾ ಮಡಿ ಅವರಿಗೆ ವಿದ್ಯಾರ್ಥಿ ಸಂಘದ ನಾಯಕ ಅಭಿದೇವ್, ನಾಯಕಿ ದೇವರ್ಣಿನಿ ಪಾದ ಪೂಜೆಯನ್ನು ಮಾಡುವುದರೊಂದಿಗೆ ಅವರಿಂದ ಆಶೀರ್ವಾದವನ್ನು ಪಡೆದುಕೊಂಡರು. ಸುದೀರ್ಘ 33 ವರ್ಷಗಳಗಳ ಕಾಲ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದಕ್ಕಾಗಿ ಸುನೀತಾ ಮಡಿ ಅವರಿಗೆ ಶಕ್ತಿ ವಿದ್ಯಾ ಸಂಸ್ಥೆಯ ಗುರುಬಳಗದ ವತಿಯಿಂದ ಸನ್ಮಾನ ಪತ್ರವನ್ನು ನೀಡಿ ಸನ್ಮಾನಿಸಲಾಯಿತು. ನಂತರ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಮತ್ತು ಶಿಕ್ಷಕ ವರ್ಗ ಸುನೀತಾ ಮಡಿ ಅವರಿಂದ ಆಶೀರ್ವಾದವನ್ನು ಸ್ವೀಕರಿಸಿದರು.

ಶಕ್ತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರದೀಪ್ ಕುಮಾರ್ ಶೆಟ್ಟಿ, ಶಕ್ತಿ ವಸತಿ ಶಾಲಾ ಪ್ರಾಂಶುಪಾಲೆ ಸುರೇಖಾ ಆರ್. ಭಟ್ ಮತ್ತು ಶಿಕ್ಷಕ ವರ್ಗ ಉಪಸ್ಥಿತರಿದ್ದರು.

ವಿದ್ಯಾರ್ಥಿನಿ ಅದಿತಿ ದಿನದ ಪ್ರಾಮುಖ್ಯತೆಯನ್ನು ವಾಚಿಸಿದರು. ಶಿಕ್ಷಕ ಶರಣಪ್ಪ ಸ್ವಾಗತಿಸಿದರು, ವಿದ್ಯಾರ್ಥಿನಿ ರುಚಿಕ ಕಾರ್ಯಕ್ರಮವನ್ನು ನಿರೂಪಿಸಿ, ರಿಯಾ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article