ಆಲಂಗಾರು ಪ್ರೌಢಶಾಲೆಯಲ್ಲಿ "ಸ್ವಾಸ್ತ್ಯ ಸಂಕಲ್ಪ" ಕುರಿತು ಜಾಗೃತಿ

ಆಲಂಗಾರು ಪ್ರೌಢಶಾಲೆಯಲ್ಲಿ "ಸ್ವಾಸ್ತ್ಯ ಸಂಕಲ್ಪ" ಕುರಿತು ಜಾಗೃತಿ


ಮೂಡುಬಿದಿರೆ: ಶ್ರೀ ಕ್ಷೇ.ಧ. ಗ್ರಾಮಾಭಿವೃದ್ಧಿ ಯೋಜನೆಯ  ಮೂಡುಬಿದಿರೆ ತಾಲೂಕು ಜನ ಜಾಗೃತಿ ವೇದಿಕೆಯ ವತಿಯಿಂದ  ಅಲಂಗಾರ್ ವಲಯದ ಸೈಂಟ್ ಥೋಮಸ್ ಪ್ರೌಢಶಾಲೆಯಲ್ಲಿ "ಸ್ವಾಸ್ತ್ಯ ಸಂಕಲ್ಪ" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. 


ಶಾಲೆಯ ಮುಖ್ಯ ಶಿಕ್ಷಕಿ ಸಿಲ್ವೀಯಾ ಡೇಸಾ ಅಧ್ಯಕ್ಷತೆಯನ್ನು ವಹಿಸಿಕೊಡಿದ್ದರು. 

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಶಿಭಿರಾಧಿಕಾರಿ ದೇವಿ ಪ್ರಸಾದ್ ಅವರು ವಿದ್ಯಾರ್ಥಿಗಳಿಗೆ ದುಶ್ಚಟ ವಿರುದ್ಧ ಮಂಜಾಗೃತೆಯ ಕುರಿತು ಮಾಹಿತಿ ಮಾರ್ಗದರ್ಶನ ನೀಡಿದರು. 

ಮೂಡುಬಿದಿರೆ ತಾಲೂಕು ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ವಾಸುದೇವ ನಾಯಕ್, ಜನ ಜಾಗೃತಿ ವೇದಿಕೆಯ ವಲಯಧ್ಯಕ್ಷ ದಯಾನಂದ ಪೈ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಒಕ್ಕೂಟದ ಅಧ್ಯಕ್ಷ ಸುರೇಂದ್ರ ಪೂಜಾರಿ ಉಪಸ್ಥಿತರಿದ್ದರು.

ವಲಯ ಮೇಲ್ವಿಚಾರಕರಾದ ಚಂದ್ರಹಾಸ ಸ್ವಾಗತಿಸಿ, ಸೇವಾಪ್ರತಿನಿಧಿ ಉಷಾ ಕಿರಣ್ ವಂದಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article