ಕಾರ್ಗಿಲ್ ಯುದ್ದಭೂಮಿಯಲ್ಲಿ ಸೈನಿಕರ ಶೌರ್ಯ ಅಪ್ರತಿಮ

ಕಾರ್ಗಿಲ್ ಯುದ್ದಭೂಮಿಯಲ್ಲಿ ಸೈನಿಕರ ಶೌರ್ಯ ಅಪ್ರತಿಮ


ಮಂಗಳೂರು: ಕಾರ್ಗಿಲ್ ಯುದ್ಧದ ಭೀಕರ ಸನ್ನಿವೇಶದಲ್ಲಿ ನಮ್ಮ ದೇಶದ ವೀರ ಸೈನಿಕರು ತೋರಿದ ಶೌರ್ಯ ಅಪ್ರತಿಮ. ಶತ್ರುಗಳ ಗುಂಡಿಗೆ ಬೆನ್ನು ತೋರಿಸದೆ, ಎದೆಕೊಟ್ಟು ಹೋರಾಡಿದ ಆ ರಣಧಿರರು ದೇಶದ ಒಂದಿಂಚು ನೆಲವನ್ನೂ ಬಿಟ್ಟುಕೊಡುವುದಿಲ್ಲ’ ಎಂದು ವೀರಾವೇಶದಿಂದ ಜಯಭೇರಿ ಬಾರಿಸಿದರು. ತಮ್ಮ ಪ್ರಾಣವನ್ನೇ ತೃಣಕ್ಕೆ ಸಮಾನವಾಗಿ ಭಾವಿಸಿ ಗಡಿಕಾಯ್ದ ಆ ಅಮರ ಯೋಧರ ತ್ಯಾಗದ ನೆರಳಿನಲ್ಲಿ ನಾವಿಂದು ನೆಮ್ಮದಿಯ ಜೀವನ ನಡೆಸುತ್ತಿದ್ದೇವೆ ಎಂದು ಸಂಸದ ಕ್ಯಾ. ಬ್ರಿಜೇಶ್ ಚೌಟ ಹೇಳಿದರು.


ಕದ್ರಿಹಿಲ್ಸ್ ಯುದ್ಧ ಸ್ಮಾರಕದಲ್ಲಿ ಭಾನುವಾರ ಕಾರ್ಗಿಲ್ ವಿಜಯ ದಿವಸ ಕಾರ್ಯಕ್ರಮ ಹಾಗೂ ಟಿ 55 ಟ್ಯಾಂಕ್ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಟಿ 55 ಟ್ಯಾಂಕ್ ಲೋಕಾರ್ಪಣೆ ಮಾಡಿದ ಬಳಿಕ ಅವರು ಮಾತನಾಡಿದರು.


ಕಾರ್ಗಿಲ್ ಬಲಿದಾನಕ್ಕೆ ಸೂಕ್ತ ಗೌರವ ಸಲ್ಲಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ. ರಾಷ್ಟ್ರ ಮೊದಲು ಎಂಬ ಸದಾಶಯ ನಮ್ಮ ಜೀವನದ ಮಂತ್ರವಾಗಬೇಕು. ನಮ್ಮ ವೈಯಕ್ತಿಕ ಹಿತಾಸಕ್ತಿಗಿಂತ ದೇಶದ ಹಿತಾಸಕ್ತಿಯೇ ಹಿರಿದಾದುದು. ಜಗತ್ತಿಗೆ ಶಾಂತಿ ಮತ್ತು ಜನದ ದಾರಿ ತೋರಿಸಿದ ನಮ್ಮ ಸನಾತನ ಸಂಸ್ಕೃತಿ, ಪರಂಪರೆ ಹಾಗೂ ರಾಷ್ಟ್ರದ ಶ್ರೇಷ್ಠ ವ್ಯವಸ್ಥೆಯನ್ನು ಗೌರವಿಸಿ, ಸಂರಕ್ಷಿಸಬೇಕಾದ ಹೊಣೆಗಾರಿಕೆ ನಮ್ಮ ಹೆಗಲ ಮೇಲಿದೆ ಎಂದರು.

ಶಾಸಕ ಡಿ. ವೇದವ್ಯಾಸ ಕಾಮತ್ ಮಾತನಾಡಿ, ಇಲ್ಲಿನ ಯುದ್ಧ ಸ್ಮಾರಕ ಪರಿಸರ ಅಭಿವೃದ್ಧಿ ಮಾಡಬೇಕು ಎಂಬ ಸಂಕಲ್ಪದೊಂದಿಗೆ ಟಿ 55 ಟ್ಯಾಂಕ್ ಲೋಕಾರ್ಪಣೆ ಮಾಡಲಾಗಿದೆ. ಇಲ್ಲಿ. ಶೇ.75ರಷ್ಟು ಕೆಲಸ ಆಗಿದೆ. ಮುಂದೆ ಶೀಘ್ರ ಉಳಿಕೆ ಅಭಿವೃದ್ಧಿ ಕೆಲಸ ಮಾಡಲಾಗುವುದು. ಯುದ್ಧ ವಿಮಾನ ತರಬೇಕೆಂಬ ಸಂಸದರ ಕನಸು ಶೀಘ್ರ ನನಸಾಗಲಿ ಎಂದರು.

ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಮಾಜಿ ವಿಧಾನ ಪರಿಷತ್ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧಿಕ್ಷಕ ಅನಿಲ್ ಭೂಮರೆಡ್ಡಿ, ಮಾಜಿ ಸಚಿವ ನಾಗರಾಜ್ ಶೆಟ್ಟಿ, ಶ್ರೀಶಾ ಸೌಹಾರ್ದ ಸೊಸೈಟಿ ಅಧ್ಯಕ್ಷ ಗುರುರಾಜ್ ಎಂ., ಕಲ್ಕೂರ ಪ್ರತಿಷ್ಠಾನ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರು, ರೆಡ್ ಕ್ರಾಸ್ ಅಧ್ಯಕ್ಷ ಶಾಂತರಾಮ ಶೆಟ್ಟಿ, ರೋಟರಿ ಜಿಲ್ಲಾ ಗವರ್ನರ್ ಸತೀಶ್ ಬೋಳಾರ್, ಮಾಜಿ ಸೈನಿಕರಾದ ಶರತ್ ಭಂಡಾರಿ, ಬ್ರಿಗೆಡಿಯರ್ ಐ.ಎನ್.ರೈ ಮತ್ತಿತರರು ಇದ್ದರು.

ದ.ಕ.ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಶ್ರೀಕಾಂತ್ ಶೆಟ್ಟಿ ಸ್ವಾಗತಿಸಿ, ಕಾರ್ಯದರ್ಶಿ ದೀಪಕ್ ವಂದಿಸಿದರು.


ಟಿ 55 ಟ್ಯಾಂಕ್ ಲೋಕಾರ್ಪಣೆ:

ಕದ್ರಿಹಿಲ್ಸ್‌ನ ಯುದ್ಧ ಸ್ಮಾರಕದ ಬಳಿ ರಸ್ತೆ ಬದಿಯಲ್ಲಿ ಟಿ 55 ಟ್ಯಾಂಕ್‌ನ್ನು ಗಣ್ಯರು ಲೋಕಾರ್ಪಣೆ ಮಾಡಿದರು. ನಾಲ್ಕು ದಶಕಗಳಿಗೂ ಹೆಚ್ಚ ಕಾಲ ಭಾರತೀಯ ಸೇನೆಯಲ್ಲಿ ಈ ಟಿ 55 ಟ್ಯಾಂಕ್ ಕಾರ್ಯನಿರ್ವಹಿಸಿದ್ದು, ಸೈನಿಕರ ಹಲವು ಗೆಲುವಿನಲ್ಲಿ ಪಾತ್ರ ವಹಿಸಿತ್ತು. 2011 ರಲ್ಲಿ ಇದರ ಸೇವೆ ಕೊನೆಗೊಂಡಿತ್ತು.


ಯುದ್ಧ ಸ್ಮಾರಕದಲ್ಲಿ ಲೋಕಾರ್ಪಣೆ ಮಾಡಲಾಗಿರುವ ಟಿ 55 ಟ್ಯಾಂಕ್‌ನ್ನು ಜಿಲ್ಲೆಯ ಸೈನಿಕರಿಗೆ ಸಮರ್ಪಣೆ ಮಾಡಿದ್ದೇವೆ. ಅದು ಕೇವಲ ಉಕ್ಕಿನ ವಸ್ತುವಲ್ಲ. ಅದು ಅಸಂಖ್ಯಾತ ಸೈನಿಕರ ತ್ಯಾಗ, ದೈರ್ಯ, ದೇಶದ ಭವಿಷ್ಯಕ್ಕೆ ಸಾಹಸದ ಸಾಕ್ಷಿ. ಈ ಸ್ಥಳ ಪೂಜನೀಯ ಸ್ಥಳ ಆಗಭೆಕು. ಪೂಜನೀಯ ಭಾವನೆಯಿಂದ ಕಾಣಬೇಕು. ಇಲ್ಲಿ ಇನ್ನಷ್ಟು ಅಭಿವೃದ್ಧಿ ಕೆಲಸ ಆಗಿ, ಇದು ಪ್ರತಿ ದಿನ ತೆರೆದಿಡಬೇಕು. ಮಂಗಳೂರಿಗೆ ಯುದ್ಧ ವಿಮಾನ (ಮಿಗ್) ತರುವ ಕೆಲಸ ಮಾಡುತ್ತೇನೆ. -ಕ್ಯಾ. ಬ್ರಿಜೇಶ್ ಚೌಟ, ಸಂಸದರು

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article