’ಯುವಜನ ಆಯೋಗ’ ರಚನೆಗೆ ಆಗ್ರಹ

’ಯುವಜನ ಆಯೋಗ’ ರಚನೆಗೆ ಆಗ್ರಹ


ಮಂಗಳೂರು: ಕರ್ನಾಟಕದಲ್ಲಿ ಯುವಜನರಿಗಾಗಿ ಪ್ರತ್ಯೇಕ ’ಯುವಜನ ಆಯೋಗ’ (Youth Commission) ರಚಿಸುವಂತೆ ಆಗ್ರಹಿಸಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ಕರ್ನಾಟ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ. ಶಹೀದ್ ತೆಕ್ಕಿಲ್ ನವದೆಹಲಿಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿಯಾಗಿ ಮನವಿ ಪತ್ರವನ್ನು ಸಲ್ಲಿಸಿದರು.

ಭೇಟಿಯ ವೇಳೆ ರಾಜ್ಯದಲ್ಲಿ ಹತ್ತು ಸಾವಿರ ’ಭಾರತ್ ಜೋಡೋ ಯುವ ಸಂಘಟನೆ ’ ರಚಿಸಿದ್ದಕ್ಕೆ ಡಿ.ಕೆ. ಶಿವಕುಮಾರ್ ಅವರಿಗೆ ಶಹೀದ್ ತೆಕ್ಕಿಲ್ ಅವರು ಅಭಿನಂದನೆ ಸಲ್ಲಿಸಿದರು. ಬಳಿಕ ರಾಜ್ಯದಲ್ಲಿ ಯುವಜನ ಆಯೋಗದ ಅಗತ್ಯತೆಯ ಕುರಿತು ವಿವರಿಸಿ ಮನವಿ ನೀಡಿದರು . 

ರಾಜ್ಯದಲ್ಲಿ ಈಗಾಗಲೇ ವಿವಿಧ ವರ್ಗಗಳ ಏಳಿಗೆಗಾಗಿ ಪ್ರತ್ಯೇಕ ಆಯೋಗಗಳಿವೆ,ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗ (SC/ST Commission), ಅಲ್ಪಸಂಖ್ಯಾತರ ಆಯೋಗ (Minority Commission), ಮಹಿಳಾ ಆಯೋಗ ಮತ್ತು ಮಕ್ಕಳ ಹಕ್ಕುಗಳ ಆಯೋಗ (Women commission and Chil Protection Commission)

ಇದೇ ಮಾದರಿಯಲ್ಲಿ, ಯುವಜನರ ಭವಿಷ್ಯ, ಮಾದಕ ವ್ಯಸನ ಮುಕ್ತ ಯುವಕರು, ಉದ್ಯೋಗ, ಮತ್ತು ಅವರ ಹಕ್ಕುಗಳ ರಕ್ಷಣೆಗಾಗಿ ಪ್ರತ್ಯೇಕ ’ಯುವಜನ ಆಯೋಗ’ ರಚನೆಯಾಗಬೇಕಾದ ತುರ್ತು ಅಗತ್ಯವಿದೆ ಎಂದು ಶಹೀದ್ ಅವರು ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಸಲ್ಲಿಸಿದ ವೇಳೆ ಒತ್ತಾಯಿಸಿದರು.

ವರದಿ ಕೇಳಿದ ಮುಖ್ಯಮಂತ್ರಿ..

ಮನವಿಯನ್ನು ಕೂಲಂಕುಷವಾಗಿ ಆಲಿಸಿದ ಡಿ.ಕೆ. ಶಿವಕುಮಾರ್ ಅವರು  ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಪ್ರಸ್ತುತ ದೇಶದ ಇತರ ರಾಜ್ಯಗಳಲ್ಲಿ ಯುವಜನ ಆಯೋಗಗಳು ಯಾವ ರೀತಿ ಕಾರ್ಯನಿರ್ವಹಿಸುತ್ತಿವೆ ಮತ್ತು ಅವುಗಳ ಕಾರ್ಯವೈಖರಿ ಹೇಗಿದೆ ಎಂಬುದರ ಕುರಿತು ಸಮಗ್ರ ವರದಿಯನ್ನು ಸಿದ್ಧಪಡಿಸಿ ಪ್ರಸ್ತಾವನೆಯನ್ನು ನೀಡುವಂತೆ ಟಿ.ಎಂ. ಶಹೀದ್ ತೆಕ್ಕಿಲ್ ಅವರಿಗೆ ಮುಖ್ಯಮಂತ್ರಿಗಳು ಸೂಚಿಸಿದ್ದಾರೆ.ಆಯೋಗ ರಚನೆಯ ಕುರಿತು ಮುಖ್ಯಮಂತ್ರಿಗಳು ಮುಂದಿನ ಹೆಜ್ಜೆ ಇಡುವ ಸಾಧ್ಯತೆ ಇದೆ ಎಂದು ತೆಕ್ಕಿಲ್ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article