ತಗ್ಗು ಪ್ರದೇಶದ ಸರಕಾರಿ ನಿವೇಶನದದಲ್ಲಿ ಮನೆ ಕಟ್ಟಿ ವಾಸ್ತವ್ಯ, ಭೂ ಕುಸಿತಕ್ಕೆ ಯಾರು ಹೊಣೆ: ಐವನ್ ಡಿಸೋಜ ಪ್ರಶ್ನೆ

ತಗ್ಗು ಪ್ರದೇಶದ ಸರಕಾರಿ ನಿವೇಶನದದಲ್ಲಿ ಮನೆ ಕಟ್ಟಿ ವಾಸ್ತವ್ಯ, ಭೂ ಕುಸಿತಕ್ಕೆ ಯಾರು ಹೊಣೆ: ಐವನ್ ಡಿಸೋಜ ಪ್ರಶ್ನೆ

ಮಂಗಳೂರು: ಮಂಗಳೂರು ನಗರದಲ್ಲಿ ಕೆಲವು ಕಡೆ ತಗ್ಗು ಪ್ರದೇಶದಲ್ಲಿ ಹಂಚಿಕೆ ಮಾಡಲಾದ ಸರಕಾರಿ ನಿವೇಶನದಲ್ಲಿ ಮನೆ ಕಟ್ಟಿ ವಾಸುತ್ತಿದ್ದಾರೆ. ಈ ಜಮೀನಿನ ಮೇಲಿನ ಜಾಗ ಖಾಸಗಿಯವರದ್ದು, ಒಂದು ವೇಳೆ ಅಲ್ಲಿ ಭೂಕುಸಿತ ಉಂಟಾಗಿ ಕೆಳಗಿನ ಪ್ರದೇಶದಲ್ಲಿರುವ ಮನೆಗೆ ಬಿದ್ದು ಮನೆ ಹಾನಿಗೊಂಡರೆ ಅದಕ್ಕೆ ಯಾರು ಜವಾಬ್ದಾರರು ? ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಪ್ರಶ್ನಿಸಿದ್ದಾರೆ.

ದ.ಕ. ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ರವಿವಾರ ನಡೆದ ವಿಪತ್ತು ನಿರ್ವಹಣೆ ಮತ್ತು ಕುಡಿಯುವ ನೀರಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.

ಸರಕಾರಿ ಜಾಗ ನಿವೇಶನ ಕೊಟ್ಟರೆ ಮಾತ್ರ ಸಾಲದು ಅಲ್ಲಿ ಕಟ್ಟಲಾದ ಮನೆಗಳಿಗೆ ತಡೆಗೋಡೆಯನ್ನು ಕಟ್ಟಿಕೊಡುವ ನಿಟ್ಟಿನಲ್ಲಿ ಕಂದಾಯ ಇಲಾಖೆ ಮತ್ತು ಮಹಾನಗರಪಾಲಿಕೆ ಗಮನ ಹರಿಸಲಿ ಎಂದು ಮಂಗಳೂರು ನಗರ ಶಾಸಕ ವೇದವ್ಯಾಸ ಕಾಮತ್ ಹೇಳಿದರು. 

ರಾಷ್ಟ್ರೀಯ ಹೆದ್ದಾರಿಯಲ್ಲಿ ಪಂಪುವೆಲ್, ಕೊಟ್ಟಾರ,ನಂತೂರು, ಎಜೆ ಆಸ್ಪತ್ರೆಯ ಬಳಿ , ತೊಕ್ಕೊಟ್ಟು ಜಂಕ್ಷನ್ನ ಸಮಸ್ಯೆಯ ಬಗ್ಗೆ ಸಚಿವ ಖಾದರ್ ಗರಂ ಆಗಿ ಅಧಿಕಾರಿಗಳನ್ನು ತರಾಟೆಗೆ ತೆಗದುಕೊಂಡರು. 

ಈ ಹಂತದಲ್ಲಿ ಎನ್‌ಎಚ್‌ಎ ಅಧಿಕಾರಿಗಳು ಕಾಮಗಾರಿಗೆ ಕೆಲವು ಇಲಾಖೆಗಳ ಅಸಹಕಾರ ಕಾರಣವಾಗಿದೆ. ನಂತೂರ್ನಲ್ಲಿ ಮೆಸ್ಕಾಂನ ಕಂಬ ತೆರವುಗೊಳಿಸಲು ವಿಳಂಬವಾಗಿದೆ. ಪಿಡಬ್ಲ್ಯುಡಿ ಅಸಹಾಕಾರ ಇದೆ ಎಂದು ಹೇಳಿದರು. 

ನಂತೂರಿನಲ್ಲಿ ರಾಷ್ಟ್ರೀಯ ಹೆದ್ದಾರಿಯ ಬದಿಯ ಹಳೆಯ ಕಟ್ಟಡವೊಂದು ರೋಡ್ ಕಟ್ಟಿಂಗ್ನಿಂದಾಗಿ ಅಪಾಯ ದಲ್ಲಿದೆ ಎಂದು ವಿಧಾನ ಪರಿಷತ್ ಐವನ್ ಡಿ ಸೋಜ ಧ್ವನಿಗೂಡಿಸಿದರು. 

ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಪರಸ್ಪರ ಸಹಕಾರ ನೀಡಿದರೆ ಸಮಸ್ಯೆ ಬಗೆ ಹರಿಸಬಹುದು. ಪಿಡಬ್ಲ್ಯುಡಿ ಅಧಿಕಾರಿಗಳು ಯಾಕೆ ಮೌನ ವಹಿಸಿದ್ದಾರೆ. ಎನ್‌ಎಚ್‌ಎ ಮತ್ತು ಪಿಡಬ್ಲ್ಯುಡಿ ಅಧಿಕಾರಿಗಳು ಒಂದು ಕಡೆ ಕೂತು ಕೊಂಡು ಚರ್ಚಿಸಿ ಸಮಸ್ಯೆ ಬಗೆಹರಿಸಿ. ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಜನಪ್ರತಿನಿಧಿಗಳು ಸಾರ್ವಜನಿಕರಿಂದ ಪೆಟ್ಟು ತಿನ್ನುವಂತಾಗಿದೆ ಎಂದು ಖಾದರ್ ಸೂಚನೆ ನೀಡಿದರು. 

ರಾಷ್ಟ್ರೀಯ ಹೆದ್ದಾರಿ ಇಲಾಖೆಯಲ್ಲಿ ಸಿಬ್ಬಂದಿಯ ಕೊರತೆ ಇದೆ. ನಾವು ಈ ಸಮಸ್ಯೆಯ ಬಗ್ಗೆ ಹಲವು ಸಭೆಗಳಲ್ಲಿ ಗಮನ ಸೆಳೆದಿದ್ದರೂ ಸಮಸ್ಯೆ ಬಗೆಹರಿದಿಲ್ಲ ಎಂದು ಅಧಿಕಾರಿ ಸಮಯ ಗಮನ ಸೆಳೆದರು. 

ಅಪಾಯದಲ್ಲಿರುವ ಶಾಲಾ ಕೊಠಡಿಗಳ ವರದಿ ನೀಡಿ: ೨೦೨೬ನೇ ಸಾಲಿನಲ್ಲಿ ಜಿಲ್ಲೆಯಲ್ಲಿ ಮಳೆಯಿಂದಾಗಿ ಹಾನಿ ಗೊಳಗಾದ ೯೧ ಪ್ರಾಥಮಿಕ ಶಾಲೆಗಳ ದುರಸ್ತಿಗೆ ೧೫೦.೦೦ಲಕ್ಷ ರೂ ಹಾಗೂ ೧೧೫ ಅಂಗನವಾಡಿ ಕೇಂದ್ರಗಳ ದುರಸ್ಥಿಗೆ ರೂ. ೨೫೦.೦೦ ಲಕ್ಷಗಳ ಅನುದಾನವನ್ನು ಎನ್ಡಿಎಫ್ , ಎಸ್ಡಿಆರ್‌ಎಫ್ ಮಾರ್ಗಸೂಚಿಗಳನ್ವಯ ಬಿಡುಗಡೆ ಮಾಡಲು ಕ್ರಮ ವಹಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು. 

ಕೆಲವು ಶಾಲೆಗಳಲ್ಲಿ ಕೊಠಡಿಗಳು ನಾದುರಸ್ಥಿಯಲ್ಲಿರುವ ಬಗ್ಗೆ ಪತ್ರಿಕೆಗಳಲ್ಲಿ ವರದಿ ಪ್ರಕಟವಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಡಾ.ಮಂಜುನಾಥ ಭಂಡಾರಿ ಗಮನ ಸೆಳೆದರು. 

ಈಗ ಎಷ್ಟು ಶಾಲೆಗಳಲ್ಲಿ ಶಾಲಾ ಕೊಠಡಿ ಕಟ್ಟಡಗಳು ಮತ್ತು ಆವರಣಗೋಡೆಗಳು ಅಪಾಯದಲ್ಲಿದೆ ಎಂಬ ಬಗ್ಗೆ ವರದಿ ನೀಡುವಂತೆ ಶಿಕ್ಷಣ ಇಲಾಖಾ ಅಧಿಕಾರಿಗಳು ಸಚಿವರು ಸೂಚಿಸಿದರು. 

ಶ್ರೀಕ್ಷೇತ್ರ ಸುಬ್ರಹ್ಮಣ್ಯದಲ್ಲಿ ವೈದ್ಯರ ನೇಮಕವಾಗಲಿ: ಶ್ರೀಕ್ಷೇತ್ರ ಸುಬ್ರಹ್ಮಣ್ಯಕ್ಕೆ ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವ ಹಿನ್ನೆಲೆಯಲ್ಲಿ ಸುಬ್ರಹ್ಮಣ್ಯದ ಸರಕಾರಿ ಆಸ್ಪತ್ರೆಯಲ್ಲಿ ರಾತ್ರಿ ಹೊತ್ತಿನಲ್ಲೂ ವೈದ್ಯರು ಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ಮನವಿ ಮಾಡಿದರು. 

ದೇವಸ್ಥಾನದ ಆಡಳಿತ ಸಮಿತಿಯಿಂದ ವೈದ್ಯರ ನೇಮಕವಾಗಲಿ. ಕ್ಷೇತ್ರಕ್ಕೆ ಕೋಟಿಗಟ್ಟಲೆ ಆದಾಯ ಬರುತ್ತದಲ್ಲ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು. ಆ ನಿಟ್ಟಿನಲ್ಲಿ ಗಮನ ಹರಿಸಿ ಎಂದು ಸಚಿವ ಖಾದರ್ ಅವರು ಆರೋಗ್ಯ ಇಲಾಖೆಗೆ ಸೂಚಿಸಿದರು. 

ಕೃತಜ್ಞತಾ ಪತ್ರ: 

ನಗರದ ನಾಗೂರಿ ಬಳಿ ಬುಧವಾರ ಸಂಭವಿಸಿದ ತಡೆಗೋಡೆ ಕುಸಿತದಿಂದಾಗಿ ಮೃತಪಟ್ಟವರ ಕುಟುಂಬಸ್ಥರಿಗೆ ನೆರವಾದವರಿಗೆ ಆರೋಗ್ಯ ಸಚಿವ ಯು.ಟಿ. ಖಾದರ್ ಅವರು ಶ್ಲಾಘನೀಯ ಮತ್ತು ಕೃತಜ್ಞತಾ ಪತ್ರವನ್ನು ವಿತರಿಸಿದರು.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article