ಯುವಜನರ ಪರವಾಗಿ ಮೊಂಬತ್ತಿ ಪ್ರತಿಭಟನೆ
Sunday, July 26, 2026
ಮಂಗಳೂರು: ಯುವಜನರ ಭವಿಷ್ಯ, ನ್ಯಾಯ ಹಾಗೂ ಪಾರದರ್ಶಕತೆಯ ಪರವಾಗಿ ಬೆಂಬಲ ವ್ಯಕ್ತಪಡಿ ಸುವ ಉದ್ದೇಶದಿಂದ ನಗರದ ಬೆಂದೂರಿನ ಸಂತ ಸೆಬಾಸ್ಟಿಯನ್ ಚರ್ಚ್ ವತಿಯಿಂದ ಚರ್ಚ್‌ನ ಪ್ರವೇಶ ದ್ವಾರದ ಬಳಿ ಶನಿವಾರ ಮೊಂಬತ್ತಿ ಪ್ರಾರ್ಥನಾ ಪ್ರತಿಭಟನೆ ನಡೆಸಿದರು.
ಯುವಜನರ ನ್ಯಾಯಯುತ ಹಕ್ಕುಗಳು ಹಾಗೂ ಭವಿಷ್ಯದ ಪರವಾಗಿ ಒಗ್ಗಟ್ಟಿನ ಸಂದೇಶ ನೀಡು ಸಲುವಾಗಿ ಆಯೋಜಿಸಲಾದ ಶಾಂತಿಯುತ ಮೊಂಬತ್ತಿ ಪ್ರತಿಭಟನೆಯ ನೇತೃತ್ವವನ್ನು ಚರ್ಚ್ ಧರ್ಮಗುರು ಫಾ. ವಾಲ್ಟರ್ ಡಿಸೋಜ ವಹಿಸಿದ್ದರು.
ಸಹಾಯಕ ಧರ್ಮಗುರುಗಳಾದ ಫಾ. ಜೋಯೆಲ್, ಅರುಣ್ ಪಿಂಟೋ, ಉಪಾಧ್ಯಕ್ಷ ದೀಪಕ್ ಡಿಸೋಜ, ಕಾರ್ಯದರ್ಶಿ ರಾಮ್‌ಸ್ಟನ್ ಫೆಲಿಯಸ್ ಮತ್ತಿತರರು ಭಾಗವಹಿಸಿದ್ದರು.