ಪ್ರತಿಭಟನೆಯಲ್ಲಿ ಭಾರೀ ಜನ, ಆಯೋಜಕರಿಗೆ ಕಾರಣ ಕೇಳಿ ನೋಟಿಸ್: ಕಮಿಷನರ್

ಪ್ರತಿಭಟನೆಯಲ್ಲಿ ಭಾರೀ ಜನ, ಆಯೋಜಕರಿಗೆ ಕಾರಣ ಕೇಳಿ ನೋಟಿಸ್: ಕಮಿಷನರ್


ಮಂಗಳೂರು: ಶುಕ್ರವಾರ ಮಂಗಳೂರಿನಲ್ಲಿ ಪ್ರತಿಭಟನೆ ವೇಳೆ ನಿರೀಕ್ಷೆಗೂ ಮೀರಿದ ಜನಸಂದಣಿ ಉಂಟಾಗಿದೆ. ಪರಿಣಾಮ ಟ್ರಾಫಿಕ್ ದಟ್ಟಣೆ, ಜನ ಸಂಚಾರಕ್ಕೆ ಅನಾನುಕೂಲ ಉಂಟಾದ ಪರಿಣಾಮ ಆಯೋಜಕರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗುವುದು ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ.

ಮಾಧ್ಯಮಗಳ ಜತೆ ಮಾತನಾಡಿ, ಪ್ರತಿಭಟನೆಯಲ್ಲಿ ಎಷ್ಟು ಜನ ಭಾಗವಹಿಸಲಿದ್ದಾರೆ ಅಥವಾ ಸಭೆಯ ಯೋಜನೆ ಏನು ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ನೀಡಲು ಸಾಧ್ಯವಾಗದಿದ್ದರೂ ಆಯೋಜಕರಿಗೆ ಅನುಮತಿ ನೀಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸಾಮಾನ್ಯ ಷರತ್ತುಗಳೊಂದಿಗೆ ಅವರಿಂದ ಮುಚ್ಚಳಿಕೆ ಪಡೆಯಲಾಗಿತ್ತು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರುವ ಸಾಧ್ಯತೆ ಪರಿಗಣಿಸಿ ಅಗತ್ಯ ಸಿಬಂದಿ ನಿಯೋಜನೆ, ಸಂಚಾರ ಬದಲಾವಣೆ ಸಹಿತ ವ್ಯಾಪಕ ಭದ್ರತ ವ್ಯವಸ್ಥೆ ಕಲ್ಪಿಸಲಾಗಿತ್ತು ಎಂದು ತಿಳಿಸಿದ್ದಾರೆ.

ಕಾನೂನುಬದ್ಧ ಸಾರ್ವಜನಿಕ ಸಭೆಗಳು ಮತ್ತು ಪ್ರತಿಭಟನೆಗಳಿಗೆ ಅಗತ್ಯ ಸಹಕಾರ ನೀಡುವುದರೊಂದಿಗೆ, ಸಾರ್ವಜನಿಕ ಸುವ್ಯವಸ್ಥೆ ಮತ್ತು ಸುರಕ್ಷೆಯನ್ನು ಕಾಪಾಡುವ ಬದ್ಧತೆ ಪೊಲೀಸ್ ಇಲಾಖೆ ಮುಂದುವರಿಸಲಿದೆ ಎಂದು ಅವರು ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article