ಕೋಮುಗಲಭೆ ಸೃಷ್ಟಿಗೆ ಸಂಚು ಎಸಿಗೆ ಮನವಿ
ಸಮಾಜ ವಿರೋಧಿ ಶಕ್ತಿಗಳ ವಿರುದ್ಧ ಕ್ರಮ: ಮಾನವಬಂಧುತ್ವ ವೇದಿಕೆ ಆಗ್ರಹ
ಸಾಮಾನ್ಯ ಘಟನೆಯೊಂದರ ಸುತ್ತ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಹಾಗೂ ಕೋಮು ಗಲಭೆಯಂತಹ ಕೃತ್ಯಗಳನ್ನು ಹುಟ್ಟು ಹಾಕಲು ಈ ಸಮಾಜ ವಿರೋಧಿ ಶಕ್ತಿಗಳು ಹುನ್ನಾರ ನಡೆಸುತ್ತಿವೆ ಎಂಬುವುದು ನಂತರ ನಡೆದ ಹಲವು ಬೆಳವಣಿಗೆಗಳ ಮೂಲಕ ಸ್ಪಷ್ಟವಾಗಿ ಕಂಡುಬರುತ್ತಿದೆ. ಈ ಘಟನೆಯಲ್ಲಿನ ಎರಡೂ ತಂಡಗಳ ಮೇಲೂ ಪೊಲೀಸ್ ಇಲಾಖೆಯಲ್ಲಿ ಪ್ರಕರಣ ದಾಖಲುಗೊಂಡಿದ್ದರೂ, ಈ ಪ್ರಕರಣವನ್ನು ತಿರುಚಿ ಜನಸಾಮಾನ್ಯರಿಗೆ ತಪ್ಪು ಮಾಹಿತಿ ರವಾನಿಸುವ ಪ್ರಯತ್ನ ನಡೆಸಲಾಗುತ್ತಿದೆ. ಇದರಿಂದ ಸಮಾಜದ ವಿವಿಧ ಸಮುದಾಯಗಳ ನಡುವೆ ಅಪನಂಬಿಕೆ, ಭಯ ಹಾಗೂ ಉದ್ರಿಕ್ತ ವಾತಾವರಣ ನಿರ್ಮಾಣದ ಸಾಧ್ಯತೆ ಇರುವುದರಿಂದ ತಾಲೂಕಿನಲ್ಲಿ ನೆಮ್ಮದಿ ಶಾಂತಿ ಸೌಹಾರ್ಧತೆ ಸ್ಥಿರಗೊಳ್ಳಲು ಈ ಸಮಾಜ ವಿರೋಧಿ ಶಕ್ತಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮಾನವ ಬಂಧುತ್ವ ವೇದಿಕೆ ಆಗ್ರಹಿಸಿದೆ.
ಈ ನಿಯೋಗದಲ್ಲಿ ಮಾನವ ಬಂಧುತ್ವ ವೇದಿಕೆ ಪ್ರಧಾನ ಸಂಚಾಲಕ ಅಮಳ ರಾಮಚಂದ್ರ, ಸಹ ಸಂಚಾಲಕರಾದ ಮೌರೀಸ್ ಮಸ್ಕರೇನಸ್, ಉಲ್ಲಾಸ್ ಕೊಟ್ಯಾನ್, ಮಹಮ್ಮದ್ ರಿಯಾಝ್, ಸಮಿತಿ ಸದಸ್ಯರಾದ ಝುಬೈರ್ ಪಿ.ಕೆ, ಸಲೀಂ ಮಾಯಂಗಳ, ಜಮಾಲ್ ಎಂ.ಜಿ.ರೋಡ್, ಮುಬೀನ್ ಇಂದಿರಾನಗರ, ಶರೀಫ್ ಇಂದಿರಾನಗರ ಹಾಗೂ ಚಂದ್ರಶೇಖರ ಕುರಿಂಜ ಉಪಸ್ಥಿತರಿದ್ದರು.