ಸೆ.30 ರೊಳಗೆ ರೇಷನ್ ಕಾರ್ಡ್ ಇ-ಕೆವೈಸಿ ಮಾಡಿ: ಜಯಂತಿ ವಿ.ಪೂಜಾರಿ

ಸೆ.30 ರೊಳಗೆ ರೇಷನ್ ಕಾರ್ಡ್ ಇ-ಕೆವೈಸಿ ಮಾಡಿ: ಜಯಂತಿ ವಿ.ಪೂಜಾರಿ

ಬಂಟ್ವಾಳ: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯಡಿ ಪಡಿತರ ಪಡೆಯುತ್ತಿರುವ ಫಲಾನುಭವಿಗಳ ಆಧಾರ್ ಸೀಡಿಂಗ್ ಮತ್ತು ಇ-ಕೆವೈಸಿಯನ್ನು ಸೆ.30 ರ ಒಳಗಾಗಿ ಕಡ್ಡಾಯವಾಗಿ ಮಾಡುವಂತೆ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಬಂಟ್ವಾಳ ತಾಲೂಕು ಸಮಿತಿ ಅಧ್ಯಕ್ಷೆ ಜಯಂತಿ ವಿ.ಪೂಜಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬಂಟ್ವಾಳ ತಾಲೂಕಿನಲ್ಲಿ ಇ-ಕೆವೈಸಿ ದೃಢಿಕರಿಸಿ 5 ವರ್ಷ ಪೂರೈಸಿದ ಪಡಿತರ ಚೀಟಿಗಳು 45,480, ಇ-ಕೆವೈಸಿ ದೃಡೀಕರಿಸಿ 5 ವರ್ಷ ಪೂರೈಸಿದ ಪಡಿತರ ಚೀಟಿ ಫಲಾನುಭವಿಗಳ ಸಂಖ್ಯೆ 1441923 ಇದ್ದು, ಅರ್ಹ ಫಲಾನುಭವಿಗಳ ಪಡಿತರ ಚೀಟಿ ರದ್ದಗಾದಂತೆ ಪಡಿತರ ಅಂಗಡಿದಾರರು ಜವಾಬ್ದಾರಿ ವಹಿಸಬೇಕು ಎಂದು ಅವರು ತಿಳಿಸಿದ್ದಾರೆ.

ಗೃಹ ಜ್ಯೋತಿ:

ಗೃಹ ಜ್ಯೋತಿ ಮರುಪರಿಶೀಲನೆಗೆ ಬಾಕಿ ಉಳಿದವರು ತಮ್ಮ ದಾಖಲೆಗಳನ್ನು ಆಗಸ್ಟ್ 30 ರ ಒಳಗಾಗಿ ನಿಮ್ಮ ಹತ್ತಿರದ ಮಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸಿ ಒದಗಿಸಿ ಗೃಹಜ್ಯೋತಿಯ ಪ್ರಯೋಜನವನ್ನು ಪಡೆದುಕೊಳ್ಳುವಂತೆಯು ಅವರು ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.  

ಭಾರತ್ ಜೋಡೋ ಸದಸ್ಯರಾಗಿ:

ರಾಹುಲ್ ಗಾಂಧಿ ಅವರ ಯುವ ದೃಷ್ಟಿಕೋನ ಹಾಗೂ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರ ಸಂಘಟನಾ ಶಕ್ತಿಯೊಂದಿಗೆ ಯುವಕ-ಯುವತಿಯರನ್ನು ಒಗ್ಗೂಡಿಸುವ ಭಾರತ್ ಜೋಡೋ ಸಂಘಟನೆ ಅಭಿಯಾನಕ್ಕೆ ಬಂಟ್ವಾಳ ತಾಲೂಕಿನ 16 ರಿಂದ 35 ವರುಷದ ಯುವಕ, ಯುವತಿಯರು ಸದಸ್ಯತ್ವ ಪಡೆಯಲು ನೊಂದಾವಣಿ ಮಾಡಿಕೊಂಡು ಗ್ರಾಮದ ಅಭಿವೃದ್ಧಿ ಹಾಗೂ ಸೇವೆ ಮಾಡುವ ಅವಕಾಶವನ್ನು ಪಡೆದುಕೊಳ್ಳಬೇಕಾಗಿಯು ಜಯಂತಿ ಪೂಜಾರಿ ಅವರು ಪ್ರಕಟಣೆಯಲ್ಲಿ ಕೋರಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article