ನೇತ್ರಾವತಿ ಸಹಜ ಸ್ಥಿತಿಗೆ ವಾಪಸ್
Tuesday, August 4, 2026
ಬಂಟ್ವಾಳ: ಕಳೆದರೆಡು ದಿನಗಳಿಂದ ಗಾಳಿ, ಮಳೆಯಿಂದಾಗಿ ಬೋರ್ಗರೆಯುತ್ತಿದ್ದ ನೇತ್ರಾವತಿ ನದಿ ಮಂಗಳವಾರ ಸಹಜಸ್ಥಿತಿಗೆ ಬಂದಿದೆ.
ಎರಡು ದಿನಗಳ ಕಾಲ 8.5 ಮೀ.ರಲ್ಲಿ ಮೈದುಂಬಿ ಹರಿದು ಆತಂಕಕ್ಕೀಡು ಮಾಡಿದ್ದ ನೇತ್ರಾವತಿ ಮಂಗಳವಾರ ಸಂಜೆಯ ವೇಳೆ 4.1 ಮೀ.ನಲ್ಲಿದ್ದು, ನದಿ ತೀರದ ಜನರು ಕೊಂಚ ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದೆರಡುದಿನಗಳ ಕಾಲ ವಿಪರೀತ ಗಾಳಿ, ಮಳೆಯಿಂದಾಗಿ ನೇತ್ರಾವತಿ ನದಿ ನೀರು ನೆರೆ ನೀರು ಹಲವು ತಗ್ಗು ಪ್ರದೇಶಗಳಿಗೆ ನೀರು ನುಗ್ಗಿತ್ತು.
ಹಲವೆಡೆ ತೋಟ, ಗದ್ದೆಗಳಿಗೂ ನೀರು ನುಗ್ಗಿತ್ತು. ಪಾಣೆಮಂಗಳೂರಿನ ಆಲಡ್ಕ ಪರಿಸರದ 15 ಮನೆಗಳಿಗೆ ನೀರು ನುಗ್ಗಿದ್ದರಿಂದ ಕುಟುಂಬಸ್ಥರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿತ್ತು.