ಕ್ಯಾಂಟೀನ್‌ನಲ್ಲೆ ಆತ್ಮಹತ್ಯೆ
Sunday, August 23, 2026
ಬಂಟ್ವಾಳ: ತುಂಬೆ ರಾಮಲ್ ಕಟ್ಟೆಯಲ್ಲಿರುವ ಕ್ಯಾಂಟೀನ್‌ನಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.
ರಾಮಲ್‌ಕಟ್ಟೆಯ ಅರ್ಬನಗುಡ್ಡೆ ನಿವಾಸಿ ನಾರಾಯಣ ಪೂಜಾರಿ (56) ಆತ್ಮಹತ್ಯೆ ಮಾಡಿಕೊಂಡವರೆಂದು ಗುರುತಿಸಲಾಗಿದೆ, ಬೆಳಗ್ಗೆ 8 ಗಂಟೆ ಸುಮಾರಿಗೆ ಕ್ಯಾಂಟೀನ್‌ಗೆ ಹೋಗಿ ಬರುವುದಾಗಿ ಮನೆಯಿಂದ ಹೊರಟಿದ್ದ ಅವರು ಸಂಜೆಯಾದರೂ ಮನೆಗೆ ಬಾರದಿದ್ದರಿಂದ ಮನೆಮಂದಿ ಕ್ಯಾಂಟೀನ್‌ನ್‌ಗೆ ಹುಡುಕಿಕೊಂಡು ಹೋದಾಗ ಅವರು ಕ್ಯಾಂಟೀನ್‌ನಲ್ಲೇ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆನ್ನಲಾಗಿದೆ.
ಆತ್ಮಹತ್ಯೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಬಂಟ್ವಾಳ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.