ಪಾಂಡುರಂಗ ಪ್ರಭು ನಿಧನ
ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತರಾಗಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಜೈಲುವಾಸವನ್ನು ಅನುಭವಿಸಿದ್ದ ಅವರು,ಅಯೋಧ್ಯೆ ಶ್ರೀರಾಮ ಜನ್ಮಭೂಮಿ ಹೋರಾಟದಲ್ಲೂ ಸಕ್ರಿಯವಾಗಿ ಭಾಗವಹಿಸಿದ್ದರು. ಅಯೋಧ್ಯೆಯ ಬಾಬರಿ ಮಸೀದಿ ಧ್ವಂಸಗೊಳಿಸಲಾದ ಸಂದರ್ಭದಲ್ಲಿಯು ಅವರು ಕರಸೇವಕರಾಗಿ ತೆರಳಿ ಸಕ್ರಿಯವಾಗಿ ಪಾಲ್ಗೊಂಡು ಯುವಕರಿಗೆ ಪ್ರೇರಣೆಯಾಗಿದ್ದರು.
ಕರೆಸೇವಗಾಗಿ ಆಯೋದ್ಯೆಗೆ ತೆರಳಿದ ಸಂದರ್ಭದಲ್ಲಿ ಬಿಜೆಪಿಯ ಹಿರಿಯ ನೇತಾರರಾದ ಲಾಲ್ ಕೃಷ್ಣ ಅಡ್ವಾಣಿಯವರ ಸಹಿತ ಪಕ್ಷದ ಹಲವಾರು ಹಿರಿಯ ಮುಖಂಡರ ಜೊತೆ ಸಂಪರ್ಕವನ್ನು ಹೊಂದಿದ್ದರು.
ಆರಂಭಿಕವಾಗಿ ಗಣೇಶ್ ಬೀಡಿ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದ ಅವರು ಬಳಿಕ ಊರಿಗಾಗಮಿಸಿ ರಿಕ್ಷಾ ಚಾಲಕರಾಗಿ ದುಡಿಯಿತ್ತಿದ್ದರು. ಭಾರತೀಯಮಜ್ದೂರು ಆಟೋರಿಕ್ಷಾ ಚಾಲಕ, ಮಾಕರ ಬಂಟ್ವಾಳ ಘಟಕದ ಸ್ಥಾಪಕರಲ್ಲೋರ್ವರಾಗಿದ್ದರು.
ಇವರು ಪಾಣೆಮಂಗಳೂರು ಪರಿಸರ ಮತ್ತು ಅತ್ಮೀಯ ವಲಯದಲ್ಲಿ ದೀನದಯಾಳ್ ಎಂದೇ ಜನಪ್ರಿಯರಾಗಿದ್ದು, ಅವರ ಆಟೋರಿಕ್ಷಾಕ್ಕು "ದೀನದಯಾಳ್ "ಎಂದೇ ಹೆಸರಿನ್ನಿಟ್ಟಿದ್ದರು.
ಭಾರತೀಯ ಜನತಾ ಪಕ್ಷದಿಂದ ಪಾಣೆಮಂಗಳೂರು ವಾರ್ಡ್‌ನಿಂದ ಸ್ಪರ್ಧಿಸಿ ಬಂಟ್ವಾಳ ಪುರಸಭೆಯ ಸದಸ್ಯರಾಗಿಯು ಜನಮನ್ನಣೆ ಗಳಿಸಿದ್ದರು.
ಅವಿವಾಹಿತರಾಗಿದ್ದ ಪಾಂಡುರಂಗ ಪ್ರಭು ಅವರು ತಮ್ಮ ಯೌವನದ ದಿನಗಳಲ್ಲಿ ಹೆಗಲಿಗೊಂದು ಕೇಸರಿ ಶಾಲು ಹಾಕಿಕೊಂಡು ಸಂಘ, ಪಕ್ಷ ಹಾಗೂ ಹಿಂದುತ್ವದ ಚಟುವಟಿಕೆಗಳಿಗೆ ಮುಡಿಪಾಗಿಟ್ಟು ಪಕ್ಷದ ವಿವಿಧ ಹಂತಗಳಲ್ಲಿ ಮಾರ್ಗದರ್ಶಕರಾಗಿ ಸೇವೆ ಸಲ್ಲಿಸಿದ್ದರು.
ಸಾಮಾಜಿಕ, ಧಾರ್ಮಿಕ, ಸಹಕಾರಿ ರಂಗದಲ್ಲು ಸಕ್ರಿಯವಾಗಿದ್ದ ಅವರು ಪಾಣೆಮಂಗಳೂರು ರೈತರ ಸೇವಾ ಸಹಕಾರಿ ಸಂಘದ ನಿರ್ದೇಶಕರಾಗಿ, ಪಾಣೆಮಂಗಳೂರು ಶಾರದಾ ಪೂಜಾ ಸಮಿತಿಯ ಅಧ್ಯಕ್ಷರಾಗಿ, ವೀರ ವಿಠ್ಠಲ ವೆಂಕಟರಮಣ ಸ್ವಾಮಿ ದೇವಸ್ಥಾನ ಪಾಣೆಮಂಗಳೂರು ಇದರ ಮಾಜಿ ಮೊಕ್ತೇಸರರಾಗಿಯು ಕಾರ್ಯನಿರ್ವಹಿಸಿದ್ದರು.ಪಾಂಡುರಂಗ
ಪ್ರಭು ಅವರು ಸ್ಥಳೀಯವಾಗಿ ಪಾಂಡು ಮಾಮ್ ಎಂದೇ ಜನಾನುರಾಗಿದ್ದರು. ನಿಧನ ಹೊಂದಿದರು.
ಅಂತಿಮ ನಮನ:
ಎನ್. ಪಾಂಡುರಂಗ ಪ್ರಭು ಅವರ ಪಾರ್ಥಿವ ಶರೀರವನ್ನು ಭಾನುವಾರ ಸಂಜೆ ಪಾಣೆಮಂಗಳೂರಿನಲ್ಲಿರುವ ಮೂಲ ನಿವಾಸಕ್ಕೆ ತರಲಾಗಿದ್ದು,ಬಳಿಕ ಸಾರ್ವಜನಿಕರ ಅಂತಿಮ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.
ಈ ಸಂದರ್ಭ ಆರ್ ಎಸ್ ಎಸ್ ಮುಖಂಡ ಡಾ. ಪ್ರಭಾಕರ ಭಟ್ ಕಲ್ಲಡ್ಕ, ಸಂಸದ ಕ್ಯಾ. ಬ್ರಿಜೇಶ್ ಚೌಟ, ಶಾಸಕ ರಾಜೇಶ್ ನಾಯ್ಕ್, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭಕೊಟ್ಟಾರಿ ಸಹಿತ ಹಲವಾರು ಗಣ್ಯರು, ಪ್ರಮುಖರು ಅಂತಿಮ ದರ್ಶನ ಪಡೆದರು. ಮೃತರು ಇಬ್ಬರು ಸಹೋದರಿಯರ ಸಹಿತ ಕುಟುಂಬಸ್ಥರನ್ನು ಅಗಲಿದ್ದಾರೆ.
ಬಿಜೆಪಿ ಬಂಟ್ವಾಳ ಮಂಡಲ ಹಾಗೂ ಬಿಜೆಪಿ ನರಿಕೊಂಬು ಶಕ್ತಿ ಕೇಂದ್ರ ಸಮಿತಿ ಶೋಕ ವ್ಯಕ್ತಪಡಿಸಿದೆ.