ವ್ಯಸನಮುಕ್ತ ಬದುಕಿನಿಂದ ಸುಂದರ ಭವಿಷ್ಯ ನಿರ್ಮಾಣ: ಡಾ. ಡಿ. ವೀರೇಂದ್ರ ಹೆಗ್ಗಡೆ

ವ್ಯಸನಮುಕ್ತ ಬದುಕಿನಿಂದ ಸುಂದರ ಭವಿಷ್ಯ ನಿರ್ಮಾಣ: ಡಾ. ಡಿ. ವೀರೇಂದ್ರ ಹೆಗ್ಗಡೆ


ಧರ್ಮಸ್ಥಳ: ಜೀವನದಲ್ಲಿ ಆರೋಗ್ಯವೇ ನಿಜವಾದ ಭಾಗ್ಯ. ದುಶ್ಚಟಗಳಿಂದ ದೂರವಾಗಿ ಮಾನಸಿಕ ಪರಿವರ್ತನೆ ಹೊಂದುವುದರ ಮೂಲಕ ಬದುಕು ರೂಪಿಸಿಕೊಳ್ಳಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಹೇಳಿದರು.

ಅವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವ್ಯಸನಮುಕ್ತಿ ಮತ್ತು ಸಂಶೋಧನ ಕೇಂದ್ರದಲ್ಲಿ ನಡೆದ 277ನೇ ವಿಶೇಷ ಮದ್ಯವರ್ಜನ ಶಿಬಿರದ 58 ಮಂದಿ ಶಿಬಿರಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.

ವ್ಯಸನಗಳ ಸುಳಿಯಿಂದ ಹೊರಬಂದು ಪರಿಪೂರ್ಣ ಬದುಕನ್ನು ರೂಢಿಸಿಕೊಳ್ಳು ಹಂಬಲಿಸುತ್ತಿರುವ ಮನಸ್ಸುಗಳಿಗೆ  ಧರ್ಮಸ್ಥಳದ  ಮದ್ಯವರ್ಜನ ಶಿಬಿರವು ಸದಾ ಆಸರೆಯಾಗಿದೆ. ಮದ್ಯಪಾನ ವ್ಯಕ್ತಿಯೊಬ್ಬರ ದೈಹಿಕ ಮತ್ತು ಮಾನಸಿಕವಾಗಿ ತೀವ್ರವಾಗಿ ಅವಲಂಬಿತವಾಗುವ ಗಂಭೀರ ಆರೋಗ್ಯ ಸಮಸ್ಯೆಯಾಗಿದೆ. ಮದ್ಯವರ್ಜನ ಶಿಬಿರಗಳಲ್ಲಿ ವ್ಯಕ್ತಿಗೆ ಹೊಸ ದಿನಚರಿ, ಯೋಗ, ಧ್ಯಾನ ಮತ್ತು ಧನಾತ್ಮಕ ಚಿಂತನೆಗಳ ಮೂಲಕ ಮನಃ ಪರಿವರ್ತನೆ ಮಾಡಲಾಗುತ್ತದೆ. ಮದ್ಯಪಾನವೆಂಬ ಮೃತ್ಯುಕೂಪದಿಂದ ಹೊರಬಂದು ಹೊಸ ಜೀವನವನ್ನು ಆರಂಭಿಸಲು ದೃಢ ಸಂಕಲ್ಪವೇ ಮುಖ್ಯ ಅಸ್ತ್ರ ಎಂದರು.

ಗ್ರಾಮಾಭಿವೃದ್ಧಿ ಯೋಜನೆಯ ಟ್ರಸ್ಟಿ ಡಾ. ಹರೀಶ್ ಕೃಷ್ಣ ಸ್ವಾಮಿ, ಆಡಳಿತ ಯೋಜನಾಧಿಕಾರಿ ಮಾಧವ ಗೌಡ, ಶಿಬಿರಾಧಿಕಾರಿ ದೇವಿಪ್ರಸಾದ್, ಜಯಾನಂದ, ಆರೋಗ್ಯ ಸಹಾಯಕಿ ಪ್ರೆಸಿಲ್ಲಾ ಡಿ’ಸೋಜ, ಆಪ್ತ ಸಮಾಲೋಚಕ ಜಿ.ಆರ್. ಮಧು ಉಪಸ್ಥಿತರಿದ್ದರು. 

ಮುಂದಿನ ವಿಶೇಷ ಶಿಬಿರವು ಸೆಪ್ಟಂಬರ್ 7ರಿಂದ ನಡೆಯಲಿದೆ ಎಂದು ವೇದಿಕೆಯ ಪ್ರಕಟಣೆ ತಿಳಿಸಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article