ಗೋಲ್ಡನ್ ಮೂವಿ ನಿರ್ಮಾಣ: ‘ಪಿಚ್ಚರ್’ ಆ.7 ರಂದು ರಾಜ್ಯಾದ್ಯಂತ ತೆರೆಗೆ
ನಗರದಲಗಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಾವಳಿ ಮಾತ್ರವಲ್ಲ ಜಮ್ಮು ಮತ್ತು ಕಾಶ್ಮೀರದಲ್ಲಿ ಈ ಚಿತ್ರದ ಚಿತ್ರೀಕರಣ ನಡೆಸಲಾಗಿದೆ. ಈ ಚಿತ್ರದಲ್ಲಿ ಕರಾವಳಿಯ ಎಲ್ಲ ಹಿರಿಯ, ಕಿರಿಯ ಅನುಭವಿ ಕಲಾವಿದರಲ್ಲದೆ, ಹೊಸ ಕಲಾವಿದರೂ ನಟಿಸಿದ್ದಾರೆ. ಉಡುಪಿ ಮತ್ತು ಪುತ್ತೂರುಗಳಲ್ಲಿ ಚಿತ್ರದ ಪ್ರೀಮಿಯರ್ ಶೋ ನಡೆದಿದ್ದು, ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಮುಂದಿನ ದಿನಗಳಲ್ಲಿ ಗಡಿನಾಡು ಕಾಸರಗೋಡು, ಗಲ್ಫ್ ರಾಷ್ಟ್ರ ಮಾತ್ರವಲ್ಲದೆ ಒಟಿಟಿಯಲ್ಲೂ ಈ ಚಿತ್ರ ಕಾಣಿಸಲಿದೆ ಎಂದರು.
ತುಳುವರಿಗೆ ಮೆಚ್ಚುಗೆ..
ತುಳುವಿನ ಕಾಮಿಡಿ, ಕನ್ನಡದ ಭಾವನಾತ್ಮಕತೆಯ ಸಮ್ಮಿಳಿತ ಈ ಚಿತ್ರವಾಗಿದ್ದು, ತುಳುವಿನ ದೊಡ್ಡ ಕಲಾವಿದರು ನಟಿಸಿರುವುದು ಖುಷಿ ತಂದಿದೆ. ನನ್ನ ಮೊದಲ ಚಿತ್ರದ ನಿರ್ದೇಶಕರೂ ಕರಾವಳಿಯವರೇ ಎಂಬುದು ಅಭಿಮಾನದ ಸಂಗತಿ. ಇಲ್ಲಿನ ಕಲಾವಿದರು ತುಳು ಭಾಷೆಗೆ ನೀಡುವ ಕೊಡುಗೆಗೆ ಹ್ಯಾಟ್ಸ್‌ಅಪ್ ಎಂದರು.
ಈ ಚಿತ್ರಕ್ಕೆ ತುಳು ಭಾಷಿಕರೂ ಉತ್ತಮ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸ ಇದೆ. ಹಾಗಾಗಿ ಈ ಚಿತ್ರದ ಸೂಪರ್ ಹಿಟ್ ಎಂರೆ ಪ್ರೇಕ್ಷಕರೇ. ಯಾವುದೇ ಸಿನಿಮಾಗೆ ಹೂಡಿದ ಬಂಡವಾಳ ಶೇ.ನೂರರಷ್ಟು ವಾಪಸ್ ಸಿಗುವುದಿಲ್ಲ. ಶೇ.೫ರಿಂದ ಶೇ.೬ರಷ್ಟು ಮಾತ್ರ ಲಾಭ ಸಿಗುತ್ತದೆ. ಸಿನಿಮಾ ಸೂಪರ್‌ಹಿಟ್ ಆದರೆ ಮಾತ್ರ ಇನ್ನಷ್ಟು ಹೂಡಿಕೆದಾರರು ಒಲವು ತೋರಿಸಲು ಸಾಧ್ಯವಿದೆ ಎಂದರು.
ತುಳುವಲ್ಲಿ ನಟನೆ..
ಒಳ್ಳೆಯ ಸಿನಿಮಾ ಸಿಕ್ಕಿದರೆ ತುಳು ಭಾಷೆಯಲ್ಲಿ ನಟಿಸಲು ಸಿದ್ಧ ಎಂದ ಅವರು, ಮುಂದಿನ ಸಿನಿಮಾವನ್ನು ಸ್ಕ್ರಿಪ್ಟ್ ನೋಡಿ ನಿರ್ಧರಿಸುತ್ತೇನೆ. ಇಲ್ಲಿನ ಸಿನಿ ಪ್ರಿಯರಿಗೆ ಬೇಕಾಗುವ ಸಿನಿಮಾವನ್ನು ನಿರ್ಮಾಣ ಮಾಡಬೇಕು. ಆಗ ಮಾತ್ರ ಅದು ಯಶಸ್ವಿಯಾಗಲು ಸಾಧ್ಯ. ಕೃತಕಬುದ್ಧಿ ಮತ್ತೆ(ಎಐ) ಕ್ಷೇತ್ರದಿಂದ ಸಿನಿಮಾ ರಂಗಕ್ಕೆ ಏನೂ ತೊಂದರೆ ಆಗದು. ನಾವು ಎಐ ಅನ್ನು ಹೇಗೆ ಸ್ವೀಕರಿಸುತ್ತೇನೆ ಎನ್ನುವುದರ ಮೇಲೆ ಒಳಿತು, ಕೆಡುಕು ಅವಲಂಬಿತವಾಗಿದೆ ಎಂದರು.
ನಿರ್ಮಾಪಕಿ ಶಿಲ್ಪಾ ಗಣೇಶ್ ಮಾತನಾಡಿ, ಒಂದೂವರೆ ವರ್ಷದ ಹಿಂದೆ ಈ ಸಿನಿಮಾಗೆ ನಿರ್ಧಾರ ಮಾಡಿದ್ದೆ. ಪ್ರೀಮಿಯರ್ ಶೋಗಳಲ್ಲಿ ಪ್ರೇಕ್ಷಕರ ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಸಣ್ಣದರಲ್ಲಿ ಆರಂಭಿಸಿದ ಸಿನಿಮಾ ಈಗ ದೊಡ್ಡ ಬಜೆಟ್ ಆಗಿದೆ. ಸಿನಿಮಾದ ಎಲ್ಲ ಹಾಡುಗಳೂ ಪ್ರೇಕ್ಷಕರಿಗೆ ಇಷ್ಟವಾಗುವಂತಿದೆ. ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಜಯಭೇರಿ ಕಂಡರೆ ಇನ್ನಷ್ಟು ಸಿನಿಮಾ ಮಾಡುವ ಹುಮ್ಮಸ್ಸು ಇದೆ ಎಂದರು.
ನಾಯಕ ನಟ ನಿತ್ಯಪ್ರಕಾಶ್ ಬಂಟ್ವಾಳ್, ಗೋಲ್ಡನ್ ಮೂವಿ ನಿರ್ಮಾಣದ ಈ ‘ಪಿಚ್ಚರ್’ ಸಿನಿಮಾದಲ್ಲಿ ಮೊದಲ ಬಾರಿ ನಟಿಸುತ್ತಿದ್ದು, ಈ ಸಿನಿಮಾ ಬಹಳ ಅತ್ಯುತ್ತಮವಾಗಿ ಮೂಡಿಬಂದಿದೆ ಎಂದು ಪ್ರೀಮಿಯರ್ ಶೋ ನೋಡಿದವರು ಹೇಳುತ್ತಿದ್ದಾರೆ. ಸಿನಿಮಾ ನೋಡಿ ಇನ್ನಷ್ಟು ಪ್ರೋತ್ಸಾಹ ಇರಲಿ ಎಂದರು.
ನಾಯಕಿ ನಟಿ ಅಮೃತಾ, ಹಿರಿಯ ನಟ, ನಿರ್ದೇಶಕ -ದೇವದಾಸ್ ಕಾಪಿಕಾಡ್, ನಟ ಭೋಜರಾಜ್ ವಾಮಂಜೂರು, ನಟ ಅರ್ಜುನ್ ದೇವ್, ನಿರ್ದೇಶಕ ಸಂದೀಪ್, ಸಂಗೀತ ನಿರ್ದೇಶಕ ಸಾಮ್ಯುವೆಲ್, ಸಿನಿಮಾ ವಿತರಕರಾದ ಸಚಿನ್, ಮುನೀಂದ್ರ ಮತ್ತಿತರರಿದ್ದರು. ಅನುರಾಗ್ ನಿರೂಪಿಸಿದರು.