ಮಾನವತೆ ಸಂದೇಶ ಸಾರುವ ಸಂತ ರವಿ ದಾಸರ ಚಿಂತನೆ
ಪ್ರೊಫೆಸರ್ ನಾಗರತ್ನ ರಾವ್ ಅವರು ಭಾರತೀಯ ಸಂತ ಪರಂಪರೆಯಲ್ಲಿ ಸಂತ ರವಿ ದಾಸರು ಕಬೀರ್ ದಾಸರು ಮತ್ತು ಇತರರ ಮಾನವೀಯತೆ ಸಂದೇಶವನ್ನು ಶಾಲೆ ಮಕ್ಕಳಿಗೆ ತಿಳಿಹೇಳಿದರು.
ನವ ಭಾರತ ರಾತ್ರಿ ಪ್ರೌಢಶಾಲೆ ಮುಖ್ಯೋಪಾಧ್ಯಾಯ ವರ್ಕಾಡಿ ರವಿ ಅಲೆವೂರಾಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ, ಭಾರತೀಯ ಜ್ಞಾನಪರಂಪರೆಯಲ್ಲಿ ಸಂತರ, ಮಹಾ ಪುರುಷರ ಜೀವನ ಚರಿತ್ರೆ ಇಂದಿನ ಮಕ್ಕಳಿಗೆ ಮಾದರಿಯಾಗಿ ಸರ್ವಜನಿಕಾಗಿ ಹೇಗೆ ಬದುಕಬೇಕು ಎಂದು ಮಾರ್ಗದರ್ಶನ ನೀಡುತ್ತಾ, ವರ್ಣಿಸಿದರು.
ಶ್ರೀನಿವಾಸ್ ವಿಶ್ವವಿದ್ಯಾನಿಲಯ ಪಾಂಡೇಶ್ವರ ಅಧ್ಯಾಪಕಿ ಸ್ವಾತಿ ಕಿರಣ್ ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾರತೀಯ ಸಂತೆ ಪರಂಪರೆಯಲ್ಲಿ ಕಬೀರ್ ದಾಸ, ರವಿದಾಸರ ಜೀವನ ಚರಿತ್ರೆಯ ಮೇಲೆ ಬೆಳಕು ಚೆಲ್ಲುತ್ತಾ ದಕ್ಷಿಣ ಕನ್ನಡ ಜಿಲ್ಲೆಯ ಶ್ರೀ ನಾರಾಯಣ ಗುರು, ಕರ್ನಾಟಕದ ಸಂತ ಬಸವಣ್ಣನವರು ಹಾಗೂ ಗುರು ಜೀವನ ಸಂದೇಶವನ್ನು ತಿಳಿ ಹೇಳಿದರು.
ಈ ಕಾರ್ಯಕ್ರಮದಲ್ಲಿ ಹಿರಿಯ ಪ್ರಾಥಮಿಕ ಶಾಲೆ, ಬೈಕಂಪಾಡಿಯ (ಮುಸ್ಲಿಂ) ಮುಖ್ಯೋಪಾಧ್ಯಾಯರಾದ ಚಂದ್ರಕಲಾ, ಸಹ ಶಿಕ್ಷಕರಾದ ಕುಸುಮ ಕೆ.ಆರ್., ಹಿಂದಿ ಶಿಕ್ಷಕಿ ಯಶೋಧ .ಬಿ, ಪ್ರೌಢಶಾಲೆಯ ಮುಖ್ಯ ಶಿಕ್ಷಕರಾದ ಸುಜಯ ಬೇಕಲ್, ಪ್ರೌಢಶಾಲೆಯ ಹಿಂದಿ ಶಿಕ್ಷಕಿಯಾದ ಸವಿತಾ.ಕೆ. ಎಸ್ ಮತ್ತು ಪ್ರೌಢಶಾಲೆಯ ಮಕ್ಕಳು ಉಪಸ್ಥಿತರಿದ್ದರು.
ಈ ಕಾರ್ಯಕ್ರಮದ ಸಂಚಾಲನೆ 9ನೇ ತರಗತಿಯ ಅನ್ನು ಕುಮಾರಿ, ಪರಮಾನಂದ ಪುಂಡಲೀಕ ಕುಲಗೋಡ ಸಭೆಯನ್ನು ಸ್ವಾಗತಿಸಿದರು, ಪ್ರಕಾಶ ಕುಂಡಲಿಕ ಕುಲಗೋಡ ವಂದಿಸಿದರು. ಐದನೇ ತರಗತಿಯ ಜ್ಯೋತಿ ಕುಮಾರಿ ಸಂತ ರವಿದಾಸರ ದೋಹಾಗಳನ್ನು ಹಾಡಿ ಅದರ ಭಾವಾರ್ಥ ಹೇಳಿದರು.
ಪ್ರೌಢಶಾಲೆ 50 ಮಕ್ಕಳು ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಭಾಗವಹಿಸಿ ಈ ವ್ಯಾಖ್ಯಾನವನ್ನು ಸಾರ್ಥಕ ಗೊಳಿಸಿದರು.
