ಎಸ್.ಐ.ಆರ್: ರಾಜಕೀಯ ಪಕ್ಷಗಳ ಸಭೆ
Saturday, August 29, 2026
ಮಂಗಳೂರು: ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕರಡು ಮತದಾರರ ಪಟ್ಟಿ ಪ್ರಕಟಣೆ ಪ್ರಯುಕ್ತ ರಾಜಕೀಯ ಪಕ್ಷಗಳ ಸಭೆ ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆಯಿತು.
ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಮಾತನಾಡಿ, ಕರಡು ಮತದಾರರ ಪಟ್ಟಿಯು ಪ್ರಕಟಗೊಂಡ ನಂತರದ ಕ್ರಮಗಳ ಬಗ್ಗೆ ರಾಜಕೀಯ ಪಕ್ಷಗಳಿಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಮತದಾರರ ಪಟ್ಟಿ ಕರಡು ಪ್ರತಿಗಳನ್ನು ಎಲ್ಲಾ ರಾಜಕೀಯ ಪಕ್ಷದ ಪ್ರತಿನಿಧಿಗಳಿಗೆ ಹಸ್ತಾಂತರಿಸಲಾಯಿತು.
ವಿವಿಧ ರಾಜಕೀಯ ಪಕ್ಷಗಳ ಮುಖಂಡರಾದ ನೀರಜ್ ಪಾಲ್ (ಕಾಂಗ್ರೆಸ್), ನಿತಿನ್ ಕುಮಾರ್, ರವೀಂದ್ರ ಶೆಟ್ಟಿ, ಗುರುಚರಣ್ (ಬಿಜೆಪಿ), ಬಾಲಕೃಷ್ಣ ಶೆಟ್ಟಿ (ಸಿಪಿಐಎಂ), ಯೋಗೀಶ್ ಜಪ್ಪು, ಮುನೀರ್ ಮುಕ್ಕಚ್ಚೇರಿ, ವಸಂತ ಪೂಜಾರಿ (ಜೆಡಿಎಸ್), ಶ್ಯಾನೋನ್ ಪಿಂಟೋ (ಆಮ್ ಆದ್ಮಿ), ಸೋಮಪ್ಪ (ಬಿಎಸ್ಪಿ) ಮತ್ತಿತರರು ಉಪಸ್ಥಿತರಿದ್ದರು