ಯುನೈಟೆಡ್ ಕಿಂಗ್ಡಮ್ ನ ಅಡ್ವಾನ್ಸ್ ಎಚ್‌ಇ ಸೀನಿಯರ್ ಫೆಲೋ ಗೌರವ
ಉನ್ನತ ಶಿಕ್ಷಣ, ಶೈಕ್ಷಣಿಕ ನಾಯಕತ್ವ, ನವೀನ ಬೋಧನೆ, ಪಠ್ಯಕ್ರಮ ಅಭಿವೃದ್ಧಿ, ಗುಣಮಟ್ಟದ ಭರವಸೆ, ವಿದ್ಯಾರ್ಥಿಗಳ ಮಾರ್ಗದರ್ಶನ ಹಾಗೂ ಸಹೋದ್ಯೋಗಿಗಳ ವೃತ್ತಿಪರ ಅಭಿವೃದ್ಧಿಗೆ ನೀಡಿದ ನಿರಂತರ ಕೊಡುಗೆಯನ್ನು ಪರಿಗಣಿಸಿ ಡಾ.ಹಬೀಬ್ ಉಪ್ಪಿನಂಗಡಿಯವರಿಗೆ ಈ ಗೌರವ ನೀಡಲಾಗಿದೆ.
ಪ್ರಸಕ್ತ ಅವರು ಬಹರೈನ್ ನ ಕಿಂಗ್ಡಮ್ ಯುನಿವರ್ಸಿಟಿಯಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಹಾಗೂ ಎಂಬಿಎ ಕಾರ್ಯಕ್ರಮದ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ವಿದ್ಯಾರ್ಥಿ ಕೇಂದ್ರಿತ ಕಲಿಕೆ, ಒಳಗೊಳ್ಳುವ ಶಿಕ್ಷಣ, ಸಂಶೋಧನಾ ಆಧಾರಿತ ಬೋಧನೆ ಹಾಗೂ ಶೈಕ್ಷಣಿಕ ಚಟುವಟಿಕೆಗಳಲ್ಲಿ ತಂತ್ರಜ್ಞಾನದ ಪರಿಣಾಮಕಾರಿ ಬಳಕೆಗೆ ನೀಡಿದ ಕೊಡುಗೆಯನ್ನು ಈ ಫೆಲೋಶಿಪ್ ಗುರುತಿಸಿದೆ.
ಡಾ. ಹಬೀಬ್ ನಿರ್ವಹಣೆ, ಶಿಕ್ಷಣ, ಕೃತಕ ಬುದ್ಧಿಮತ್ತೆ ಮತ್ತು ಸಾಂಸ್ಥಿಕ ಅಧ್ಯಯನಗಳಿಗೆ ಸಂಬಂಧಿಸಿದ ಹಲವಾರು ಸಂಶೋಧನಾ ಲೇಖನಗಳನ್ನು ಪ್ರತಿಷ್ಠಿತ ಅಂತಾರಾಷ್ಟ್ರೀಯ ನಿಯತಕಾಲಿಕಗಳಲ್ಲಿ ಪ್ರಕಟಿಸಿದ್ದಾರೆ. ಈ ಸಾಧನೆಯು ಅವರ ಶೈಕ್ಷಣಿಕ ವೃತ್ತಿಜೀವನದ ಮಹತ್ವದ ಮೈಲಿಗಲ್ಲಾಗಿದೆ. ಅವರು ನಿವೃತ್ತ ಪೋಸ್ಟ್ ಮಾಸ್ಟರ್ ಯೂಸುಫ್ ಉಪ್ಪಿನಂಗಡಿ ಮತ್ತು ಆಯಿಶ ದಂಪತಿಯ ಪುತ್ರರಾಗಿದ್ದಾರೆ.