ತಲೆಮರೆಸಿಕೊಂಡಿದ್ದ ಆರೋಪಿ ಬಂಧನ: ನ್ಯಾಯಾಲಯಕ್ಕೆ ಹಾಜರು
Wednesday, August 12, 2026
ಮಂಗಳೂರು: ಸುಮಾರು ಆರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿಯನ್ನು ಮಂಗಳೂರು ಮಹಿಳಾ ಠಾಣೆಯ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಗುರುಪುರ ಉಳಾಯಿಬೆಟ್ಟು ನಿವಾಸಿ ಮೊಹಮ್ಮದ್ ಇಮ್ರಾನ್ (36) ಬಂದಿತ ಆರೋಪಿ. ಈತನ ವಿರುದ್ಧ ಮಂಗಳೂರು ಮಹಿಳಾ ಪೊಲೀಸ್ ಠಾಣೆಯ 10/2020ನೇ ಪ್ರಕರಣದಲ್ಲಿ ಕಲಂ 376, 506 ಐಪಿಸಿ ಹಾಗೂ ಮಾನ್ಯ ನ್ಯಾಯಾಲಯದ ಸಿ.ಸಿ. ನಂಬರ್ 2225/2021 ಪ್ರಕರಣದಲ್ಲಿ ವಾರೆಂಟ್ ಬಾಕಿ ಇತ್ತು.
ಸುಮಾರು ಆರು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಮಂಗಳೂರು ಮಹಿಳಾ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಗೆ ಆ. 24 ರವರೆಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಿದೆ.
ಆರೋಪಿಯ ವಿರುದ್ಧ ಪುತ್ತೂರು ಮಹಿಳಾ ಠಾಣೆಯ 16-2020ನೇ ಪ್ರಕರಣದಲ್ಲಿ ಕಲಂ 342, 363 ಐಪಿಸಿ, 12 ಪೋಕ್ಸೊ ಕಾಯ್ದೆ ಹಾಗೂ ಕಂಕನಾಡಿ ನಗರ ಠಾಣೆಯ ಅ.ಕ್ರ. 149-2012ರಲ್ಲಿ ಕಲಂ 384, 34 ಐಪಿಸಿ ಪ್ರಕರಣಗಳಲ್ಲಿಯೂ ವಾರೆಂಟ್ ಬಾಕಿ ಇವೆ.