ಮಾದಕ ವಸ್ತು ಸಾಗಾಟ: ಓರ್ವನ ಬಂಧನ, ಮಾದಕ ವಸ್ತು ವಶಕ್ಕೆ

ಮಾದಕ ವಸ್ತು ಸಾಗಾಟ: ಓರ್ವನ ಬಂಧನ, ಮಾದಕ ವಸ್ತು ವಶಕ್ಕೆ


ಮಂಗಳೂರು: ನಿಷೇಧಿತ ಮಾದಕ ವಸ್ತುವನ್ನು ಕಾರಿನಲ್ಲಿ ಸಾಗಿಸುತ್ತಿದ್ದ ಓರ್ವನನ್ನು ಬಂಧಿಸಿದ್ದು, 1,05,59,450 ರೂ. ಮೌಲ್ಯದ ಸೊತ್ತುಗಳು ವಶಕ್ಕೆ ಪಡೆಯಲಾಗಿದೆ.

ಬಂಧಿತನನ್ನು ಬೆಂಗಳೂರು ಕೆಂಗೇರಿ ನಿವಾಸಿ ಮಹಮ್ಮದ್ ಅಮೀರ್ ಜರ್ತಾಬ್ (35) ಎಂದು ಗುರುತಿಸಲಾಗಿದೆ.

ಆ.16 ರಂದು ಹಾಸನದಿಂದ ಮಂಗಳೂರಿನತ್ತ ಕಾರಿನಲ್ಲಿ ಮಾದಕ ವಸ್ತು ಸಾಗಿಸುತ್ತಿರುವ ಬಗ್ಗೆ ಮಾಹಿತಿಯ ಪ್ರಕಾರ ಬಂಟ್ವಾಳ ಗ್ರಾಮಾಂತರ ಪೊಲೀಸ್ ಉಪನಿರೀಕ್ಷಕ ಮಂಜುನಾಥ ಟಿ. ಅವರು ಕಾರನ್ನು ನಿಲ್ಲಿಸಿ ಪರಿಶೀಲಿಸಿದಾಗ ಮಾದಕ ವಸ್ತು ಪತ್ತೆಯಾಗಿದೆ.

ಕಾರನ್ನು ತಪಾಸಣೆ ನಡೆಸಿದಾಗ ಒಟ್ಟು 538.63 ಗ್ರಾಂ. ಎಂಡಿಎಂಎ ಮತ್ತು 99.12 ಗ್ರಾಂ. ಕೊಕೈನ್ ಹಾಗೂ ಖಾಲಿ ಪ್ಲಾಸ್ಟಿಕ್ ಡಬ್ಬಿಗಳು, ಡಿಜಿಟಲ್ ತೂಕದ ಯಂತ್ರ, ಸೇರಿದಂತೆ ಇತರೆ ಸೊತ್ತುಗಳು ಪತ್ತೆಯಾಗಿದ್ದು. ಅವುಗಳನ್ನು ವಶಕ್ಕೆ ಪಡೆಯಲಾಗಿದೆ. 

ಎಂಡಿಎಂಎಯ ಅಂದಾಜು ಮೌಲ್ಯವು 53,86,300 ರೂ. ಹಾಗೂ ಕೊಕೈನ್ 49,56,000 ರೂ. ಆಗಿದ್ದು, ಇತರೆ ವಶಪಡಿಸಿಕೊಂಡ ಸ್ವತ್ತುಗಳ ಮೌಲ್ಯ ಸೇರಿದಂತೆ ಒಟ್ಟು ಅಂದಾಜು ಮೌಲ್ಯ 1,05,59,450 ರೂ. ಆಗಿರುತ್ತದೆ. 

ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಲಾಗುತ್ತಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article