ಮಂಗಳೂರು-ಬೆಂಗಳೂರು ಕೆಲ ರೈಲು ಸಂಚಾರ ರದ್ದು

ಮಂಗಳೂರು-ಬೆಂಗಳೂರು ಕೆಲ ರೈಲು ಸಂಚಾರ ರದ್ದು

ಮಂಗಳೂರು: ಮೈಸೂರು ವಿಭಾಗದಲ್ಲಿರುವ ಪಶ್ಚಿಮ ಘಟ್ಟದ ಸಿರಿಬಾಗಿಲು ಮತ್ತು ಯಡಕುಮರಿ ರೈಲು ನಿಲ್ದಾಣಗಳ ನಡುವೆ ಹಳಿ ನಿರ್ವಹಣೆ ಮತ್ತು ಎಂಜಿನಿಯರಿಂಗ್ ಕಾಮಗಾರಿ ಸಲುವಾಗಿ ಕೆಲವು ರೈಲುಗಳ ಸಂಚಾರವನ್ನು ನೈರುತ್ಯ ರೈಲ್ವೆ ಅ.4ರಿಂದ ನ.4ರವರೆಗೆ ರದ್ದುಗೊಂಡಿದೆ.

ವಾರದಲ್ಲಿ ಮೂರು ದಿನ ಸಂಚರಿಸುವ ಯಶವಂತಪುರ - ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ (ಸಂಖ್ಯೆ 16575) ರೈಲು  ಅ.04, 06, 08, 11, 13, 15, 22, 25, 27, 29, ನ.01, ಮತ್ತು ನ. 03 ರಂದು  ಸಂಚರಿಸುವುದಿಲ್ಲ.  ಮಂಗಳೂರು ಜಂಕ್ಷನ್ - ಯಶವಂತಪುರ ಎಕ್ಸ್‌ಪ್ರೆಸ್   (ಸಂಖ್ಯೆ 16576 ) ರೈಲು ಅ.05, 07, 09, 12, 14, 16, 23, 26, 28, 30, ನ.02, ಮತ್ತು  ನ.04 ರಂದು ಸಂಚರಿಸುವುದಿಲ್ಲ. 

ವಾರದಲ್ಲಿ ಮೂರು ದಿನ ಸಂಚರಿಸುವ ಯಶವಂತಪುರ - ಕಾರವಾರ  ಎಕ್ಸ್‌ಪ್ರೆಸ್    ( ಸಂಖ್ಯೆ 16515) ರೈಲಿನ ಸಂಚಾರ  ಅ.05, 07, 09, 12, 14, 21, 23, 26, 28, 30, ನ.02 ರಂದು ರದ್ದುಪಡಿಸಲಾಗಿದೆ.  ಕಾರವಾರ - ಯಶವಂತಪುರ  ಎಕ್ಸ್‌ಪ್ರೆಸ್     (ಸಂಖ್ಯೆ 16516) ರೈಲು  ಅ. 06, 08, 10, 13, 15, 22, 24, 27, 29, 31 ಮತ್ತು ನ 03ರಂದು ಸಂಚರಿಸುವುದಿಲ್ಲ.  

ಯಶವಂತಪುರ - ಮಂಗಳೂರು ಜಂಕ್ಷನ್ ಸಾಪ್ತಾಹಿಕ ಎಕ್ಸ್‌ಪ್ರೆಸ್     (ಸಂಖ್ಯೆ 16539 ) ರೈಲು ಸಂಚಾರ  ಅ.10, 24, ಮತ್ತು 31 ರಂದು ರದ್ದುಗೊಳ್ಳಲಿದೆ. ಮಂಗಳೂರು ಜಂಕ್ಷನ್ - ಯಶವಂತಪುರ ಸಾಪ್ತಾಹಿಕ ಎಕ್ಸ್‌ಪ್ರೆಸ್      (ಸಂಖ್ಯೆ 16540 ) ರೈಲು ಸಂಚಾರ  ಅ. 11, 25, ಮತ್ತು ನ 01ರಂದು  ರದ್ದುಗೊಳ್ಳಲಿದೆ ಎಂದು ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಮಂಜುನಾಥ ಕನಮಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article