ಕೊಳದಲ್ಲಿ ಮುಳುಗಿ ಯುವಕ ಸಾವು

ಕೊಳದಲ್ಲಿ ಮುಳುಗಿ ಯುವಕ ಸಾವು

ಕಾಸರಗೋಡು: ಮಧೂರು ಕೂಡ್ಲುವಿನಲ್ಲಿ ಅಡಿಕೆ ತೋಟದ ಕೊಳದಲ್ಲಿ ಮುಳುಗಿ ಯುವಕನೊಬ್ಬ ಮೃತಪಟ್ಟ ಘಟನೆ ನಡೆದಿದೆ. ಕೂಡ್ಲು ರಾಮದಾಸ್ ನಗರದ ಎಸ್.ಜಿ.ಕೆ. ಟೆಂಪಲ್ ರೋಡ್ ನಿವಾಸಿ ವಿನಾಯಕ್ (26) ಮೃತಪಟ್ಟವರು. 

ಆ.10ರಿಂದ ನಾಪತ್ತೆಯಾಗಿದ್ದ ವಿನಾಯಕ್ ಅವರ ಬಟ್ಟೆ ಹಾಗೂ ಮೊಬೈಲ್ ಫೋನ್ ಕೊಳದ ಬಳಿ ಪತ್ತೆಯಾಗಿತ್ತು. ಇದನ್ನು ಗಮನಿಸಿದ ಸ್ಥಳೀಯರು ತಕ್ಷಣವೇ ಕಾಸರಗೋಡು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ತಡರಾತ್ರಿಯವರೆಗೆ ಹುಡುಕಾಟ ನಡೆಸಿದರೂ ಯುವಕ ಪತ್ತೆಯಾಗದ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿತ್ತು.ಇಂದು ಬೆಳಿಗ್ಗೆ ಮತ್ತೆ ಕಾರ್ಯಾಚರಣೆ ಆರಂಭಿಸಿದಾಗ ನೀರಿನಲ್ಲಿ ಯುವಕನ ಮೃತದೇಹ ಪತ್ತೆಯಾಗಿದೆ.

Ads on article

WhatsApp Image 2024-08-04 at 6.27.41 PM (1)

Advertise in articles 1

advertising articles 2

Advertise under the article